ನನ್ನ ಅಂಡಾಣುಗಳನ್ನು ಸಂರಕ್ಷಿಸಿಟ್ಟಿದ್ದೇನೆ, ಸದ್ಯಕ್ಕೆ ಮಗು ಪಡೆಯುವ ಆತುರವಿಲ್ಲ: ನಟಿ ಮೋನಾ ಸಿಂಗ್
ನನ್ನ ಅಂಡಾಣುವನ್ನು ನಾನು ಸಂರಕ್ಷಿಸಿಟ್ಟಿದ್ದು, ನನಗೆ ಯಾವಾಗ ಮಗು ಬೇಕು ಎನಿಸುತ್ತದೆಯೋ ಆಗ ಮಗು ಮಾಡ್ಕೋತಿನಿ ಎಂದು ಬಾಲಿವುಡ್ ನಟಿ ಮೋನಾ ಸಿಂಗ್ ಹೇಳಿದ್ದಾರೆ.

ಮುಂಬೈ: ನನ್ನ ಅಂಡಾಣುವನ್ನು ನಾನು ಸಂರಕ್ಷಿಸಿಟ್ಟಿದ್ದು, ನನಗೆ ಯಾವಾಗ ಮಗು ಬೇಕು ಎನಿಸುತ್ತದೆಯೋ ಆಗ ಮಗು ಮಾಡ್ಕೋತಿನಿ ಎಂದು ಬಾಲಿವುಡ್ ನಟಿ ಮೋನಾ ಸಿಂಗ್ ಹೇಳಿದ್ದಾರೆ.
ನಟಿ ಮೋನಾ ಸಿಂಗ್ ಕಳೆದ ವರ್ಷ ಫಿಲ್ಮ್ಮೇಕರ್ ಶ್ಯಾಮ್ ರಾಜಗೋಪಾಲನ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ತಮ್ಮ ಮಗುವಿನ ವಿಚಾರದ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಖಾಸಗಿ ಮಾಧ್ಯಮದೊಂದಿಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಮೋನಾ ಸಿಂಗ್, 'ಮಗು ಮಾಡಿಕೊಳ್ಳಲು ಕಾತುರ, ಗಡಿಬಿಡಿ ಇಲ್ಲ. ಈಗಾಗಲೇ ನನ್ನ ಅಂಡಾಣುವಿನ ಸಂರಕ್ಷಣೆ ಮಾಡಿಟ್ಟುಕೊಂಡಿದ್ದೇನೆ. '34 ವರ್ಷವಿದ್ದಾಗಲೇ ನಾನು ಅಂಡಾಣು ಸಂಗ್ರಹಣೆ ಮಾಡಿಕೊಂಡಿದ್ದೇನೆ. ನಾನೀಗ ಫ್ರೀ. ನನಗೆ ಈಗ ಮದುವೆಯಾಗಿದೆ. ನನ್ನ ಸಂಗಾತಿ ಜೊತೆಗೆ ಲೋಕ ಸುತ್ತುವುದು, ಎಂಜಾಯ್ ಮಾಡೋದು ನನ್ನ ಗುರಿ. ಅದಿನ್ನೂ ಪೂರ್ತಿ ಆಗಿಲ್ಲ. ನನ್ನ ಸ್ನೇಹಿತರು, ಕುಟುಂಬದವರ ಜೊತೆ ಸಾಕಷ್ಟು ಬಾರಿ ತಿರುಗಾಡಿದ್ದೇನೆ. ಈಗ ನನ್ನ ಗಂಡನ ಜೊತೆ ತಿರುಗಾಡಬೇಕಿದೆ. ನನಗೆ ಮಕ್ಕಳು ಅಂದರೆ ತುಂಬ ಇಷ್ಟ. ಆದರೆ ಈಗ ನನ್ನನ್ನು ಕೇಳಿದರೆ ಮಗು ಮಾಡಿಕೊಳ್ಳಲು ನಾನು ಮಾನಸಿಕವಾಗಿ ಸಿದ್ಧಳಾಗಿಲ್ಲ. ಮುಂದಿನ ದಿನಗಳಲ್ಲಿ ನಾನು ಇದರ ಬಗ್ಗೆ ಯೋಚನೆ ಮಾಡುತ್ತೇನೆ' ಎಂದು ಹೇಳಿದ್ದಾರೆ.
ಇನ್ನು ಅಂಡಾಣು ಸಂರಕ್ಷಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, 'ಅಂಡಾಣು ಸಂರಕ್ಷಣೆ ಮಾಡಿಕೊಳ್ಳುತ್ತೇನೆ ಎಂದಾಗ ನನ್ನ ತಾಯಿ ತುಂಬ ಖುಷಿಪಟ್ಟರು. ಪುಣೆಯಲ್ಲಿನ ವೈದ್ಯರ ಬಳಿ ನಾನು ಹಾಗೂ ಅಮ್ಮ ಇಬ್ಬರೂ ಹೋದೆವು. ಇದನ್ನು ಮಾಡಲು ನಾನು ಕೆಲ ತಿಂಗಳುಗಳ ಕಾಲ ಕೆಲಸದಿಂದ ದೂರವಿರಬೇಕಿತ್ತು. ಅಂಡಾಣು ಸಂರಕ್ಷಣೆ ಮಾಡಲು 5 ತಿಂಗಳು ಹಿಡಿಯಿತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


