'ಭಜರಂಗಿ ಭಾಯಿಜಾನ್' ಖ್ಯಾತಿಯ ಬಾಲಿವುಡ್ ನಟ ಕೊರೋನಾಗೆ ಬಲಿ!
ಬಾಲಿವುಡ್ ನ ಪ್ರಸಿದ್ದ ಚಿತ್ರ ಸಲ್ಮಾನ್ ಖಾನ್ ಅಭಿನಯದ "ಭಜರಂಗಿ ಭಾಯಿಜಾನ್" ನಲ್ಲಿ ಅಭಿನಯಿಸಿ ಹೆಸರಾಗಿದ್ದ ನಟ ಹರೀಶ್ ಬಚಾಟಾ (57) ಕೊರೋನಾಗೆ ಬಲಿಯಾಗಿದ್ದಾರೆ.

ಶಿಮ್ಲಾ: ದೇಶಾದ್ಯಂತ ಕೊರೋನಾ ಹೆಮ್ಮಾರಿ ವ್ಯಾಪಿಸುತ್ತಲೇ ಇದ್ದು ನ್ನೂ ಹೆಚ್ಚಿನ ಸಂಖ್ಯೆಯ ಜನರು ಸೋಂಕಿಗೆ ಒಳಗಾಗುತ್ತಲೇ ಇದ್ದಾರೆ.ಏತನ್ಮಧ್ಯೆ, ಬಾಲಿವುಡ್ ನಿಂದ ಇನ್ನೊಂದು ಕೆಟ್ಟ ಸುದ್ದಿ ಬಂದಿದೆ. ಬಾಲಿವುಡ್ ನ ಪ್ರಸಿದ್ದ ಚಿತ್ರ ಸಲ್ಮಾನ್ ಖಾನ್ ಅಭಿನಯದ "ಭಜರಂಗಿ ಭಾಯಿಜಾನ್" ನಲ್ಲಿ ಅಭಿನಯಿಸಿ ಹೆಸರಾಗಿದ್ದ ನಟ ಹರೀಶ್ ಬಚಾಟಾ (57) ಕೊರೋನಾಗೆ ಬಲಿಯಾಗಿದ್ದಾರೆ.
ಹಿಮಾಚಲ ಪ್ರದೇಶ ಮೂಲದ ಹರೀಶ್ ಮಂಗಳವಾರ ಬೆಳಿಗ್ಗೆ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 18 ವರ್ಷಗಳ ಕಾಲ ಬಾಲಿವುಡ್ ನಲ್ಲಿ ಸಕ್ರಿಯವಾಗಿದ್ದ ನಟ ಹರೀಶ್ ಬಾಲಿವುಡ್‌ನ ಅನೇಕ ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದರು.
ಚಲನಚಿತ್ರಗಳಲ್ಲದೆ, ಹರೀಶ್ ಹಲವಾರು ಟಿವಿ ಧಾರಾವಾಹಿಗಳಲ್ಲಿ ಸಹ ಅಭಿನಯಿಸಿದ್ದರು. ಸಿಐಡಿ ಅವರು ಕ್ರೈಮ್ ಪೆಟ್ರೋಲ್ ನಂತಹಾ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು.
ಮೃತ ಹರೀಶ್ ಅವರ ಅಂತ್ಯ ಸಂಸ್ಕಾರ ಮಂಗಳವಾರ ಸಂಜೆ ಕರೋನಾ ಶಿಷ್ಟಾಚಾರದ ಅಡಿಯಲ್ಲಿಅವರ ಪೂರ್ವಜರ ಸ್ಥಳವಾದ ಕನಲಾಗ್‌ನಲ್ಲಿ ನಡೆದಿದೆ. ಅವರಿಗೆ 9 ನೇ ತರಗತಿಯಲ್ಲಿ ಓದುತ್ತಿರುವ ಪುತ್ರಿ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


