ಬಾಲಿವುಡ್

ಸಾವು ಕೂಡ 'ಮೇಡ್‌ ಇನ್‌ ಚೀನಾ' ಆಗೋಯ್ತೇ..? ಕೊರೋನಾ ಕುರಿತ ಆರ್ ಜಿವಿ ಟ್ವೀಟ್ ವೈರಲ್!

ಸಾವು ಕೂಡ 'ಮೇಡ್‌ ಇನ್‌ ಚೀನಾ' ಆಗುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಬಾಲಿವುಡ್ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಹೇಳಿದ್ದಾರೆ.

ಸಾವು ಕೂಡ 'ಮೇಡ್‌ ಇನ್‌ ಚೀನಾ' ಆಗೋಯ್ತೇ..? ಕೊರೋನಾ ಕುರಿತ ಆರ್ ಜಿವಿ ಟ್ವೀಟ್ ವೈರಲ್!
ಸಂಗ್ರಹ ಚಿತ್ರ
Published On :

ವಿಶಾಖಪಟ್ಟಣ: ಸಾವು ಕೂಡ 'ಮೇಡ್‌ ಇನ್‌ ಚೀನಾ' ಆಗುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಬಾಲಿವುಡ್ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಹೇಳಿದ್ದಾರೆ.

ವಿವಾದಾತ್ಮಕ ಹೇಳಿಕೆ ಮತ್ತು ವಿವಾದಾತ್ಮಕ ಚಿತ್ರಗಳಿಂದಲೇ ಸದಾ ಸುದ್ದಿಯಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಈ ಬಾರಿ ಕೊರೋನಾ ವೈರಸ್ ಕುರಿತಂತೆ ಟ್ವೀಟ್ ಮಾಡಿ ಭಾರಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಚೀನಾದಲ್ಲಿ ಸಾವಿರಾರು ಮಂದಿಯ ಸಾವಿಗೆ ಕಾರಣವಾಗಿರುವ ಕೊರೋನಾ ವೈರಸ್ ಕುರಿತಂತೆ ಆರ್ ಜಿವಿ ಟ್ವೀಟ್ ಮಾಡಿದ್ದಾರೆ. ಸಾಮಾನ್ಯವಾಗಿ ಭಾರತೀಯ ನಾಗರಿಕರು ಸರಕುಗಳ ಬ್ರಾಂಡ್‌ಗೆ ಆದ್ಯತೆ ನೀಡುತ್ತಾರೆ. ಕಡಿಮೆ ಬೆಲೆಗೆ ದೊರೆಯುವ ಚೀನಾ ಮೇಡ್‌ ಸರಕುಗಳನ್ನು ಬಡವರು ಮತ್ತು ಕೆಳ ಮಧ್ಯಮವರ್ಗದವರು ಭಾರತದಲ್ಲಿ ಹೆಚ್ಚಾಗಿ ಕೊಳ್ಳುತ್ತಾರೆ. ಈ ಚೀನಾ ಮೇಡ್‌ ಸರಕುಗಳಿಗೂ ಮತ್ತು ಕೊರೊನಾ ವೈರಸ್‌ಗೆ ಲಿಂಕ್ ಮಾಡಿ ರಾಮ್‌ ಗೋಪಾಲ್‌ ವರ್ಮಾ ಟ್ವೀಟ್‌ ಮಾಡಿದ್ದು, ಸಾವು ಕೂಡ 'ಮೇಡ್‌ ಇನ್‌ ಚೀನಾ' ಆಗುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ. ಈ ಟ್ವೀಟ್ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಈ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತಿದ್ದು, ವರ್ಮಾ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಕೆಲ ಮಂದಿ ಚೀನಾ ವಸ್ತುಗಳಿಗೆ ಗ್ಯಾರಂಟಿ ಇರುವುದಿಲ್ಲ. ಹೀಗಾಗಿ ಚೀನಾ ಮೇಡ್ ಕೊರೋನಾ ವೈರಸ್ ಗೂ ಗ್ಯಾರಂಟಿ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯ ರಾಮ್ ಗೋಪಾಲ್ ವರ್ಮಾ 'ಎಂಟರ್ ದಿ ಗರ್ಲ್ ಡ್ರ್ಯಾಗನ್' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕೆಲವು ದೃಶ್ಯಗಳನ್ನು ಚೀನಾದಲ್ಲಿ ಚಿತ್ರಿಕರಿಸಲು ವರ್ಮಾ ನಿರ್ಧರಿಸಿದ್ದರು. ಆದರೆ ಕೊರೊನಾ ಭೀತಿಯಿಂದ ಚೀನಾ ಪ್ರವಾಸ ಕೈಬಿಟ್ಟು ಭಾರತದಲ್ಲೇ ಚಿತ್ರೀಕರಿಸಲು ವರ್ಮಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.  ಎಂಟರ್ ದಿ ಗರ್ಲ್ ಡ್ರ್ಯಾಗನ್ ಚಿತ್ರದಲ್ಲಿ ಪೂಜಾ ಬಾಲೇಕರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ವರ್ಮಾ ಎರಡು ಫೋಟೊಗಳನ್ನು ಹಂಚಿಕೊಂಡಿದ್ದು ಪೂಜಾ ಅವರನ್ನು ವರ್ಮಾ 'ಬ್ರೂಸ್ ಲೀ ಗರ್ಲ್' ಎಂದು ಕರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.