36ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ರಂಜನ್ ಸೆಹಗಲ್
ಸರ್ಬಜಿತ್ ಸಿನಿಮಾ ಖ್ಯಾತಿಯ ನಟ ರಂಜನ್ ಸೆಹಗಲ್ ನಿಧನರಾಗಿದ್ದಾರೆ. ಪಂಜಾಬಿ ಮತ್ತು ಹಿಂದಿ ಸಿನಿಮಾಗಳಲ್ಲಿ ರಂಜನ್ ಗುರುತಿಸಿಕೊಂಡಿದ್ದ ರಂಜನ್ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

ಮುಂಬಯಿ: ಸರ್ಬಜಿತ್ ಸಿನಿಮಾ ಖ್ಯಾತಿಯ ನಟ ರಂಜನ್ ಸೆಹಗಲ್ ನಿಧನರಾಗಿದ್ದಾರೆ. ಪಂಜಾಬಿ ಮತ್ತು ಹಿಂದಿ ಸಿನಿಮಾಗಳಲ್ಲಿ ರಂಜನ್ ಗುರುತಿಸಿಕೊಂಡಿದ್ದ ರಂಜನ್ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.
ರಣ್‍ದೀಪ್ ಹೂಡಾ ಮತ್ತು ಐಶ್ವರ್ಯಾ ರೈ ಬಚ್ಚನ್ ನಟನೆಯ ಸರ್ಬಜಿತ್ ಚಿತ್ರದಲ್ಲಿ ರಂಜನ್ ನಟಿಸಿದ್ದರು. ಪಂಜಾಬಿಯ ಹಲವು ಚಿತ್ರಗಳಲ್ಲಿ ನಟಿಸಿದ್ದ ರಂಜನ್ ಗೆ 2017ರಲ್ಲಿ ಬಿಡುಗಡೆಯಾಗಿದ್ದ ‘ಮಾಹಿ ಎನ್‍ಆರ್‍ಐ’ ಮತ್ತು 2014ರಲ್ಲಿ ತೆರೆಕಂಡಿದ್ದ ‘ಯಾರ್ ದಾ ಕ್ಯಾಚಪ್’ ಹೆಸರು ತಂದು ಕೊಟ್ಟಿದ್ದವು.
ಹಿಂದಿ ಅಪರಾಧ ಸೀರಿಯಲ್ ಕ್ರೈಮ್ ಪಟ್ರೋಲ್ ಮತ್ತು ಸಾವಧಾನ್ ಇಂಡಿಯಾದ ಕಾಣಿಸಿಕೊಂಡಿದ್ದ ಈ ನಟ ಜುಲೈ 11 ರಂದು ಚಂಡೀಗಡದಲ್ಲಿ ಕೊನೆಯುಸಿರೆಳೆದರು. ಪಂಜಾಬ್ ಮೂಲದವರಾದ ರಂಜನ್ ಚಂಡೀಗಢನಲ್ಲಿ ವಾಸವಾಗಿದ್ದರು.
ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಥಿಯಟರ್ ಸ್ಟಡಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡು ಮುಂಬೈಗೆ ಬಂದಿದ್ದರು. ರಿಶತೋ ಸೇ ಬಡಿ ಪ್ರಥಾ, ತುಮ್ ದೇನಾ ಸಾಥ್ ಮೇರಾ ಧಾರವಾಹಿಗಳಲ್ಲಿ ಅವಕಾಶ ಪಡೆದುಕೊಂಡಿದ್ದರು. ತದನಂತರ ಕ್ರೈಂ ಪೆಟ್ರೋಲ್ ಮತ್ತು ಸಾವಧಾನ್ ಇಂಡಿಯಾ ಸಂಚಿಕೆಗಳಲ್ಲಿ ರಂಜನ್ ನಟಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


