ಅಮೆಜಾನ್ ಪ್ರೈಂ ಜತೆ ಪ್ರಿಯಾಂಕಾ ಚೋಪ್ರಾ 'ಮಲ್ಟಿ ಮಿಲಿಯನ್-ಡಾಲರ್' ಡೀಲ್
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ಅಮೆಜಾನ್ ಪ್ರೈಂ ಜೊತೆ ಎರಡು ವರ್ಷದ ಮಲ್ಟಿ ಮಿಲಿಯನ್ ಡಾಲರ್ ಫಸ್ಟ್ ಲುಕ್ ಟಿವಿ ಡೀಲ್ ಮಾಡಿಕೊಂಡಿದ್ದಾರೆ.

ಲಾಸ್ ಎಂಜಲೀಸ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ಅಮೆಜಾನ್ ಪ್ರೈಂ ಜೊತೆ ಎರಡು ವರ್ಷದ ಮಲ್ಟಿ ಮಿಲಿಯನ್ ಡಾಲರ್ ಫಸ್ಟ್ ಲುಕ್ ಟಿವಿ ಡೀಲ್ ಮಾಡಿಕೊಂಡಿದ್ದಾರೆ.
37 ವರ್ಷದ ನಟಿ ಹಾಗೂ ನಿರ್ಮಾಪಕಿ ಇನ್‌ಸ್ಟಾಗ್ರಾಂನಲ್ಲಿ ಈ ವಿಷಯ ಹಂಚಿಕೊಂಡಿದ್ದು, ಅಂತಿಮವಾಗಿ ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.
ನಾನೊಬ್ಬ ನಟಿ ಹಾಗೂ ನಿರ್ಮಾಪಕಿಯಾಗಿ ಜಗತ್ತಿನಾದ್ಯಂತ ಭಾಷೆ, ಗಡಿ ದಾಟಿ ಪ್ರತಿಭೆಗಳಿಗೆ ಒಂದು ಮುಕ್ತ ವೇದಿಕೆಯಕನಸು ಕಂಡಿದ್ದೆ. ನನ್ನ ಪ್ರೊಡಕ್ಷನ್ ಹೌಸ್ ಪರ್ಪಲ್ ಪೆಬಲ್ ಕಂಪನಿಯ ಉದ್ದೇಶವೂ ಇದೇ ಆಗಿದೆ. ಈ ನಿಟ್ಟಿನಲ್ಲಿ ಅಮೆಜಾನ್ ಜೊತೆಗಿನ ಡೀಲ್‌ನೊಂದಿಗೆ ಹೊಸ ಹೆಜ್ಜೆ ಇಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಹೊಸ ಆಲೋಚನೆಗಳಿಗೆ ನನ್ನನ್ನು ನಾನು ತೆರೆದುಕೊಳ್ಳುವುದರ ಜೊತೆಗೆ, ಬರೀ ಮನೋರಂಜನೆ ಮಾತ್ರ ನೀಡದೆ ಅದರ ಜೊತೆಗೇ ಜನರ ದೃಷ್ಟಿ ಹಾಗೂ ಯೋಚನಾ ಲಹರಿಯನ್ನು ನಾವು ತೆರೆಯಬೇಕು. ಕಳೆದ 20 ವರ್ಷದ ಸಿನಿ ಜರ್ನಿಯಲ್ಲಿ, 60 ಸಿನಿಮಾಗಳ ನಂತರ ನನ್ನ ಕನಸು ನನಸು ಮಾಡುತ್ತಿದ್ದೇನೆ ಎಂದೆನಿಸುತ್ತಿದೆ ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


