ಬಾಲಿವುಡ್

ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಮನೆಗೆ ಹೊಸ ಅತಿಥಿಯ ಆಗಮನ!

ಖ್ಯಾತ ಬಾಲಿವುಡ್ ತಾರೆ, ಮಂಗಳೂರು ಮೂಲದ ನಟಿ ಶಿಲ್ಪಾ ಶೆಟ್ತಿ ಹಾಗೂ ರಾಜ್ ಕುಂದ್ರಾ ದಂಪತಿಗಳು ತಮ್ಮ ಮನೆಗೆ ನೂತನ ಅತಿಥಿಯನ್ನು ಸ್ವಾಗತಿಸಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಜನ್ಮಿಸಿದ ಹೆಣ್ಣು ಮಗುವಿಗೆ ತಾವು ಪೋಷಕರಾಗಿದ್ದೇವೆ ಎಂದು ನಟ ಶಿಲ್ಪಾ ಶೆಟ್ಟಿಕುಂದ್ರಾ ದಂಪತಿಗಳು ಶುಕ್ರವಾರ ಪ್ರಕಟಿಸಿದ್ದಾರೆ. ಫೆಬ್ರವರಿ 15 ರಂದು ಈ ದಂಪತಿಗಳು ತಮ್ಮ ಎರಡನೇ ಮಗುವನ್ನು

ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಮನೆಗೆ ಹೊಸ ಅತಿಥಿಯ ಆಗಮನ!
ಶಿಲ್ಪಾ ಶೆಟ್ಟಿ ದಂಪತಿ
Published On :

ಖ್ಯಾತ ಬಾಲಿವುಡ್ ತಾರೆ, ಮಂಗಳೂರು ಮೂಲದ ನಟಿ ಶಿಲ್ಪಾ ಶೆಟ್ತಿ ಹಾಗೂ ರಾಜ್ ಕುಂದ್ರಾ ದಂಪತಿಗಳು ತಮ್ಮ ಮನೆಗೆ ನೂತನ ಅತಿಥಿಯನ್ನು ಸ್ವಾಗತಿಸಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಜನ್ಮಿಸಿದ  ಹೆಣ್ಣು ಮಗುವಿಗೆ ತಾವು ಪೋಷಕರಾಗಿದ್ದೇವೆ ಎಂದು ನಟ ಶಿಲ್ಪಾ ಶೆಟ್ಟಿಕುಂದ್ರಾ ದಂಪತಿಗಳು ಶುಕ್ರವಾರ ಪ್ರಕಟಿಸಿದ್ದಾರೆ. ಫೆಬ್ರವರಿ 15 ರಂದು ಈ ದಂಪತಿಗಳು  ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದರು.

"ನಮ್ಮ ಪ್ರಾರ್ಥನೆಗೆ ಫಲ ಸಿಕ್ಕಿದೆ. ಪವಾಡದ ಮೂಲಕ ಉತ್ತರವಾಗಿ . ನಮ್ಮ ಪುಟ್ಟ ಏಂಜಲ್ ಆಗಮನವನ್ನು ಘೋಷಿಸಲು ನಮ್ಮ ಹೃದಯ ತುಂಬಿ ಬರುತ್ತಿದೆ.  ಸಮಿಶಾ ಶೆಟ್ಟಿ ಕುಂದ್ರಾ. ಫೆಬ್ರವರಿ 15, 2020 ರಂದು ಜನಿಸಿದ್ದಾಳೆ." ಶಿಲ್ಪಾ ಶೆಟ್ಟಿ ಹೇಳೀದ್ದಾರೆ.

ಶಿಲ್ಪಾ ಮತ್ತು ರಾಜ್ ಅವರು 2009 ರ ನವೆಂಬರ್‌ನಲ್ಲಿ ಮದುವೆಯಾಗಿದ್ದು  ತಮ್ಮ ಮೊದಲ ಮಗ  ವಿಯಾನ್ ಗೆ ಮೇ 2012 ರಲ್ಲಿ ಜನ್ಮ ನೀಡಿದ್ದರು.

ಇನ್ನು ನಟಿ ಶಿಲ್ಪಾ ಶೆಟ್ಟಿ ಬರೋಬ್ಬರಿ 13 ವರ್ಷಗಳ ವಿರಾಮದ ಬಳಿಕ ಶಬ್ಬೀರ್ ಖಾನ್ ಅವರ "ನಿಕಮ್ಮ" ಮೂಲಕ ಸಿನಿಲೋಕಕ್ಕೆ ಕಂ ಬ್ಯಾಕ್ ಹೇಳುತ್ತಿದ್ದಾರೆ.ಈ ಚಿತ್ರದಲ್ಲಿ ಅಭಿಮನ್ಯು ದಸ್ಸಾನಿ ಮತ್ತು ಯೂಟ್ಯೂಬ್ ಸೆನ್ಶೇಷನ್ ನಟಿ ನೆ ಶೆರ್ಲಿ ಸೆಟಿಯಾ ನಟಿಸಿದ್ದಾರೆ. ಚಿತ್ರವು ಈ ವರ್ಷ ಜೂನ್ ನಲ್ಲಿ ತೆರೆ ಕಾಣಲಿದೆ. ಅಲ್ಲದೆ ಶಿಲ್ಪಾ  ಪ್ರಿಯದರ್ಶನ್ ಅವರ "ಹಂಗಮಾ 2" ಚಿತ್ರದಲ್ಲಿ ಪರೇಶ್ ರಾವಲ್, ಮೀಜನ್ ಜಾಫೆರಿ ಮತ್ತು ದಕ್ಷಿಣ ಭಾರತ ನಟಿ  ಪ್ರಣಿತಾ ಸುಭಾಷ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.