ಬಾಲಿವುಡ್

ಸುಶಾಂತ್ ಸಿಂಗ್ ಗೆ ಸಿಗಲಿದೆ ರಾಷ್ಟ್ರೀಯ ಪ್ರಶಸ್ತಿ ಗೌರವ?

ಇತ್ತೀಚೆಗಷ್ಟೇ ಮೃತಪಟ್ಟಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ಗೆ ಮರಣೋತ್ತರ ರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳ ಗೌರವ ಲಭ್ಯವಾಗುವ ಸಾಧ್ಯತೆ ಇದೆ.

ಸುಶಾಂತ್ ಸಿಂಗ್ ಗೆ ಸಿಗಲಿದೆ ರಾಷ್ಟ್ರೀಯ ಪ್ರಶಸ್ತಿ ಗೌರವ?
ಸುಶಾಂತ್ ಸಿಂಗ್
Published On :

ಇತ್ತೀಚೆಗಷ್ಟೇ ಮೃತಪಟ್ಟಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ಗೆ ಮರಣೋತ್ತರ ರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳ ಗೌರವ ಲಭ್ಯವಾಗುವ ಸಾಧ್ಯತೆ ಇದೆ. 
  
ಪ್ರಸಕ್ತ ಸಾಲಿನ ರಾಷ್ಟ್ರೀಯ ಪುರಸ್ಕಾರಗಳ ಪೈಕಿ ಯಾವ ರೀತಿಯ ಪ್ರಶಸ್ತಿ ಸುಶಾಂತ್ ಗೆ ಲಭ್ಯವಾಗಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲವಾದರೂ ರಿಡೀಫ್ ವರದಿ ಮಾಡಿರುವುದರ ಪ್ರಕಾರ, ಸುಶಾಂತ್ ಸಿಂಗ್ ಗೆ ನೀಡಬೇಕಾದ ಗೌರವ ಪೂರ್ವಕ ಪ್ರಶಸ್ತಿಯ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಆಂತರಿಕ ಮೂಲಗಳು ತಿಳಿಸಿವೆ. 

ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಇಡೀಯ ಚಿತ್ರರಂಗವನ್ನೇ ದಿಗ್ಭ್ರಮೆಗೊಳಿಸಿತ್ತು. ಸುಶಾಂತ್ ಅವರಲ್ಲಿದ್ದ ಕಲಾ ಪ್ರತಿಭೆಯನ್ನು ಅವರ ಸಾವಿನ ನಂತರ ಗುರುತಿಸಲಾಗುತ್ತಿದೆ. ಆದರೆ ಬದುಕಿದ್ದಾಗ ಅವರ ಕಲಾ ಪ್ರತಿಭೆಗೆ ಅರ್ಹ, ಸೂಕ್ತವಾದ ಗೌರವ ದೊರೆಯಲಿಲ್ಲ. ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಸರ್ಕಾರಿ ಮೂಲಗಳು ಹೇಳಿವೆ ಎಂದು ರೀಡಿಫ್ ನ ಸುಭಾಷ್ ಕೆ ಝಾ ವರದಿ ಮಾಡಿದ್ದಾರೆ. ಸುಶಾಂತ್ ಅವರು ನಟಿಸಿರುವ ಸಿನಿಮಾಗಳ "ಚಲನಚಿತ್ರೋತ್ಸವ"ವನ್ನೂ ಆಯೋಜಿಸುವ ಕುರಿತು ಸರ್ಕಾರ ಯೋಜನೆ ರೂಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.