ಬಾಲಿವುಡ್

ಜೂನ್ 9-13 ವರೆಗೆ ಸುಶಾಂತ್ ಸಿಂಗ್ 14 ಸಿಮ್ ಕಾರ್ಡ್ ಬದಲಾಯಿಸಿದ್ದರು: ಕಾರಣ ಏನು?

ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿಗೆ ಸಂಬಂಧಪಟ್ಟ ವಿಷಯಗಳು ದಿನಕಳೆದಂತೆ ಹಲವು ತಿರುವು ಪಡೆದುಕೊಳ್ಳುತ್ತಿದೆ.

ಜೂನ್ 9-13 ವರೆಗೆ ಸುಶಾಂತ್ ಸಿಂಗ್ 14 ಸಿಮ್ ಕಾರ್ಡ್ ಬದಲಾಯಿಸಿದ್ದರು: ಕಾರಣ ಏನು?
ಸುಶಾಂತ್ ಸಿಂಗ್
Published On :

ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿಗೆ ಸಂಬಂಧಪಟ್ಟ ವಿಷಯಗಳು ದಿನಕಳೆದಂತೆ ಹಲವು ತಿರುವು ಪಡೆದುಕೊಳ್ಳುತ್ತಿದೆ. 

ಬಾಲಿವುಡ್ ನಟನ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸರಿಗೆ ಈಗ ಮತ್ತೊಂದು ಮಹತ್ವದ ಸುಳಿವು ದೊರೆತಿದ್ದು ಸುಶಾಂತ್ ಸಿಂಗ್ ಜೂ.9-13 ವರೆಗೆ ಸುಶಾಂತ್ ಸಿಂಗ್ ಬರೊಬ್ಬರಿ 14 ಸಿಮ್ ಕಾರ್ಡ್ ಗಳನ್ನು ಬದಲಾವಣೆ ಮಾಡಿದ್ದಾರೆಂಬ ಮಾಹಿತಿ ಬಹಿರಂಗಗೊಂಡಿದೆ. 

ಪ್ರಾಥಮಿಕ ವಿಚಾರಣೆಗಳ ನಂತರ ಎಸ್ಐಟಿ ತಂಡದ ಅನುಮಾನದ ಪ್ರಕಾರ, ಸುಶಾಂತ್ ಸಿಂಗ್ ಗೆ ತಮ್ಮ ಮಾಜಿ ಕಾರ್ಯದರ್ಶಿ ದಿಶಾ ಸಾಲಿಯನ್ ಆತ್ಮಹತ್ಯೆಗೆ ಕಾರಣ ಏನೆಂಬ ಮಾಹಿತಿ ಲಭ್ಯವಾಗಿತ್ತು. 

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ದಿಶಾ ಸುಶಾಂತ್ ಗೆ ಕರೆ ಮಾಡಿ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದರು, ಈ ಮಾಹಿತಿಯ ಕಾರಣದಿಂದಾಗಿ ಸುಶಾಂತ್ ಗೆ ಬೆದರಿಕೆ ಬರಲಾರಂಭಿಸಿ ಆತ ಅಷ್ಟು ಬಾರಿ ಸಿಮ್ ಬದಲಾವಣೆ ಮಾಡಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಪೊಲೀಸರ ಮಾಹಿತಿಯ ಪ್ರಕಾರ ಸಶಾಂತ್ ನ ರೂಮ್ ಪಾರ್ಟರ್ ಸಿದ್ದಾರ್ಥ್‌ ಪಿತಾನಿಗೂ ಸುಶಾಂತ್ ಮೂಲಕ ದಿಶಾ ಸಾಲಿಯಾನ್ ಸಾವಿನ ಕುರಿತು ಚಕಿತಗೊಳಿಸುವ ಮಾಹಿತಿಗಳು ಲಭ್ಯವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.