ಬಾಲಿವುಡ್

ಶೋಲೆ ಚಿತ್ರದ ಜನಪ್ರಿಯ 'ಕಲಿಯಾ' ಪಾತ್ರಧಾರಿ ವಿಜು ಕೋಟೆ ನಿಧನ 

ಬಹು ಅಂಗಾಂಗ ವೈಫಲ್ಯದಿಂದ ಹಿಂದಿ ಮತ್ತು ಮರಾಠಿ ಚಿತ್ರರಂಗದ ಹಿರಿಯ ನಟ ವಿಜು ಕೋಟೆ ಸೋಮವಾರ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಶೋಲೆ ಚಿತ್ರದ ಜನಪ್ರಿಯ 'ಕಲಿಯಾ' ಪಾತ್ರಧಾರಿ ವಿಜು ಕೋಟೆ ನಿಧನ 
ವಿಜು ಕೋಟೆ
Published On :

ಮುಂಬೈ: ಬಹು ಅಂಗಾಂಗ ವೈಫಲ್ಯದಿಂದ ಹಿಂದಿ ಮತ್ತು ಮರಾಠಿ ಚಿತ್ರರಂಗದ ಹಿರಿಯ ನಟ ವಿಜು ಕೋಟೆ ಸೋಮವಾರ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. 


ಶೋಲೆ ಸಿನಿಮಾದಲ್ಲಿ ಡಕಾಯಿತ ಕಲಿಯಾ ಮತ್ತು ಅಂದಾಜ್ ಅಪ್ನಾ ಅಪ್ನಾ ಚಿತ್ರದಲ್ಲಿ ರಾಬರ್ಟ್ ಇವರ ಬಹು ಜನಪ್ರಿಯ ಪಾತ್ರಗಳು. 


ಇಂದು ನಸುಕಿನ ಜಾವ 6.55ರ ಸುಮಾರಿಗೆ ತಮ್ಮ ನಿವಾಸದಲ್ಲಿ ವಿಜು ಕೋಟೆ ನಿಧನರಾಗಿದ್ದಾರೆ. ಹಲವು ಸಮಯಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಕೊನೆ ದಿನಗಳನ್ನು ಕಳೆಯುವುದು ಅವರಿಗೆ ಇಷ್ಟವಿರಲಿಲ್ಲ, ಹಾಗಾಗಿ ಮನೆಗೆ ಕರೆದುಕೊಂಡು ಬಂದೆವು. ನಮಗೆಲ್ಲಾ ಅವರ ಅಗಲಿಕೆ ತೀವ್ರ ದುಃಖವನ್ನುಂಟುಮಾಡಿದೆ  ಎಂದು ಅವರ ಸಂಬಂಧಿ ಭಾವನ ಬಲ್ಸವರ್ ತಿಳಿಸಿದ್ದಾರೆ.


ಇಂದು ಬೆಳಗ್ಗೆ 11 ಗಂಟೆ ಹೊತ್ತಿಗೆ ಚಂದನ್ ವಾಡಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಜನಪ್ರಿಯ ಸಿನಿಮಾಗಳಾದ 'ಖಯಾಮತ್ ಸೆ ಖಯಾಮತ್ ತಕ್,' 'ವೆಂಟಿಲೇಟರ್' ಮತ್ತು ಟಿವಿ ಶೋ 'ಝಬಾನ್ ಸಂಬಾಲ್ಕೆ' ಗಳಲ್ಲಿ ಇವರು ನಟಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.