'ನನಗೆ ದೇವರ ದಯೆ ಇದೆ,ಅದಕ್ಕಾಗಿಯೇ ಹಾಡಬಲ್ಲೆ - ರಾನು ಮಂಡಲ್
ಜೀವನ ಏರಿಳಿತಗಳಿಂದ ಕೂಡಿದ್ದರೂ ಒಂದು ದಿನ ವೇದಿಕೆಯಲ್ಲಿ ಹಾಡುವ ನಂಬಿಕೆ ನನ್ನಲ್ಲಿತ್ತು ಎಂದು ರಾತ್ರೋ ರಾತ್ರಿ ದೇಶಾದ್ಯಂತ ಮನೆ ಮಾತಾದ ಗಾಯಕಿ ರಾನು ಮಂಡಲ್ ಹೇಳಿದ್ದಾರೆ.

ಮುಂಬೈ: ಜೀವನ ಏರಿಳಿತಗಳಿಂದ ಕೂಡಿದ್ದರೂ ಒಂದು ದಿನ ವೇದಿಕೆಯಲ್ಲಿ ಹಾಡುವ ನಂಬಿಕೆ ನನ್ನಲ್ಲಿತ್ತು ಎಂದು ರಾತ್ರೋ ರಾತ್ರಿ ದೇಶಾದ್ಯಂತ ಮನೆ ಮಾತಾದ ಗಾಯಕಿ ರಾನು ಮಂಡಲ್ ಹೇಳಿದ್ದಾರೆ.
ರೈಲ್ವೆ ಫ್ಲಾಟ್ ಫಾರಂನಲ್ಲಿ ರಾನು ಮಂಡಲ್ ಹಾಡಿದ 'ಎಕ್ ಪ್ಯಾರ್ ಕಾ ನಗ್ಮಾ ಹೈ' ಗೀತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅವರು ಪ್ರಸಿದ್ಧಿಯಾದರು.
ರಾನು ಮಂಡಲ್ ಹಾಡನ್ನು ಮೆಚ್ಚಿಕೊಂಡ ಬಾಲಿವುಡ್ ಗಾಯಕ ಹಿಮೇಶ್ ರೇಶಮಿಯಾ ಅವರ ಮುಂದಿನ ಚಿತ್ರ ಹ್ಯಾಪಿ ಹಾರ್ಡಿ ಅಂಡ್ ಹೀರ್ ಚಿತ್ರದಲ್ಲಿ ಎರಡು ಗೀತೆಗಳನ್ನು ಹಾಡಿಸಿದ್ದರು.
ಈ ಚಿತ್ರದ ತೇರಿ ಮೇರಿ ಕಹಾನಿ ಗೀತೆಯ ಬಿಡುಗಡೆಯ ಸಂದರ್ಭದಲ್ಲಿ ಜನರು ತೋರಿಸಿದ ಪ್ರೀತಿಗೆ ಕೃತಜ್ಞತೆಯನ್ನು ರಾನು ಮಂಡಲ್ ಹೇಳಿದ್ದರು. ಜನರು ಅಪಾರ ಪ್ರೀತಿ ತೋರಿಸಿದ್ದು, ಹಾಡಲು ಅವಕಾಶ ದೊರೆಯಿತು, ಹಿಮೇಶ್ ಜಿ ದೊಡ್ಡ ಅವಕಾಶ ನೀಡಿದರು ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ನನ್ನಗೆ ದೇವರ ದಯೆ ಇಲ್ಲದಿದ್ದರೆ ಹಾಡಲು ಅವಕಾಶ ಸಿಗುತ್ತಿರಲಿಲ್ಲವೇನೂ, ನನ್ನ ಮೇಲೆ ದೇವರ ದಯೆ ಇದೆ ಅದಕ್ಕಾಗಿ ನಾನು ಹಾಡಬಲ್ಲೆ ಎಂದು ರಾನು ಮಂಡಲ್ ಹೇಳಿದ್ದಾರೆ.
ಹಾಡನ್ನು ಹಾಡಲು ಶುರುಮಾಡಿದಾಗ ಈ ರೀತಿಯ ಬದಲಾವಣೆ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಆದರೆ, ನನ್ನ ಧ್ವನಿಯಲ್ಲಿ ನಂಬಿಕೆ ಇತ್ತು. ಲತಾ ಮಂಗೇಶ್ಕರ್ ಅವರ ಧ್ವನಿಯಿಂದ ಸ್ಪೂರ್ತಿ ಪಡೆದು ಚಿಕ್ಕಂದಿನಿಂದಲೂ ಹಾಡುತ್ತಿದೆ. ಭವಿಷ್ಯದಲ್ಲೂ ಹಾಡುವುದನ್ನು ಮುಂದುವರೆಸುತ್ತೇನೆ. ಭರವಸೆಯನ್ನು ಕಳೆದುಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಹಾಡುಗಳನ್ನು ಕೇಳುವುದನ್ನು ನಿಲ್ಲಿಸಿರಲಿಲ್ಲ. ರಫಿ, ಮುಖೇಶ್, ಕಿಶೋರ್ ಕುಮಾರ್, ಲತಾ ಮಂಗೇಶ್ಕರ್, ಕುಮಾರ್ ಸಾನು ಮತ್ತು ಸೋನು ನಿಗಮ್ ಅವರ ಹಾಡುಗಳನ್ನು ಕ್ಯಾಸೆಟ್ ಗಳಲ್ಲಿ ಕೇಳುತ್ತಾ ನಿರಂತರವಾಗಿ ಕಲಿಯುತ್ತಿದ್ದಾಗಿ ರಾನು ಮಂಡಲ್ ಮನಬಿಚ್ಚಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


