ಹೊಸ ಕಾರು ಖರೀದಿಸಿದ ರಣವೀರ್ ಸಿಂಗ್, 'ಗಲ್ಲಿ ಬಾಯ್' ಸುತ್ತಾಡ್ತಿರೋ ಕಾರಿನ ಬೆಲೆ ಎಷ್ಟು ಗೊತ್ತಾ?
ಬಾಲಿವುಡ್ ನ ಸ್ಟಾರ್ ನಟ ರಣವೀರ್ ಸಿಂಗ್ ಅವರು ಹೊಸ ಕಾರು ಖರೀದಿ ಮಾಡಿದ್ದು, ಕೆಂಪು ಬಣ್ಣದ ಲ್ಯಾಂಬೋರ್ಗಿನಿ ಕಾರಿನಲ್ಲಿ ಮುಂಬೈನ ಗಲ್ಲಿಗಳಲ್ಲಿ 'ಗಲ್ಲಿ ಬಾಯ್' ರೌಂಡ್ ಹೊಡೆಯುತ್ತಿದ್ದಾರೆ.

ಮುಂಬೈ: ಬಾಲಿವುಡ್ ನ ಸ್ಟಾರ್ ನಟ ರಣವೀರ್ ಸಿಂಗ್ ಅವರು ಹೊಸ ಕಾರು ಖರೀದಿ ಮಾಡಿದ್ದು, ಕೆಂಪು ಬಣ್ಣದ ಲ್ಯಾಂಬೋರ್ಗಿನಿ ಕಾರಿನಲ್ಲಿ ಮುಂಬೈನ ಗಲ್ಲಿಗಳಲ್ಲಿ 'ಗಲ್ಲಿ ಬಾಯ್' ರೌಂಡ್ ಹೊಡೆಯುತ್ತಿದ್ದಾರೆ.
ರಣವೀರ್ ಸಿಂಗ್ ಅವರು ಕೆಂಪು ಬಣ್ಣದ ಲಂಬೋರ್ಗಿನಿ ಉರುಸ್ ಖರೀದಿಸಿದ್ದಾರೆ. ಮುಂಬೈನ ಬೀದಿಗಳಲ್ಲಿ ಕಾರನ್ನು ಚಲಾಯಿಸಿ ಅವರು ಆನಂದಿಸಿದ್ದಾರೆ. ಈ ಸಂದರ್ಭದಲ್ಲಿ ರಣವೀರ್ ಸಿಂಗ್ ಅವರು ಕೆಂಪು ಬಣ್ಣದ ಮ್ಯಾಚಿಂಗ್ ಕ್ಯಾಪ್ ಧರಿಸಿದ್ದರು.
ಈ ಕಾರಿನ ಬೆಲೆ ಭಾರತದಲ್ಲಿ ಸುಮಾರು ಮೂರು ಕೋಟಿ ರೂಪಾಯಿಗಳೆಂದು ಹೇಳಲಾಗಿದ್ದು, ಇದನ್ನು ವಿಶ್ವದ ಮೊದಲ ಸೂಪರ್ ಸ್ಪೋರ್ಟ್ ಯುಟಿಲಿಟಿ ವಾಹನ ಎಂದು ಕರೆಯಲಾಗುತ್ತಿದೆ.

ಬ್ರಿಟನ್ ನಲ್ಲಿ 83 ಚಿತ್ರದ ಚಿತ್ರಿಕರಣ ಮುಗಿಸಿ ರಣವೀರ್ ಮತ್ತು ದೀಪಿಕಾ ತವರಿಗೆ ಬಂದಿದ್ದಾರೆ. ಈ ಚಿತ್ರದಲ್ಲಿ ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ನಟಿಸಿದ್ದಾರೆ. ದೀಪಿಕಾ ರೋಮಿ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದಕ್ಕೂ ಮುನ್ನ ರಣವೀರ್ ಹಾಗೂ ದೀಪಿಕಾ ಸಂಜಯ್ ಲೀಲಾ ಭನ್ಸಾಲಿ ಅವರ ರಾಮ್-ಲೀಲಾ, ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


