'ಅಪರಾಜಿತಾ ಆಯೋಧ್ಯೆ' ಚಿತ್ರ ನಿರ್ಮಾಪಕಿಯಾಗಲಿರುವ ಕಂಗಾನ ರನೌತ್
ವೈವಿಧ್ಯಮಯ ಚಿತ್ರಗಳಲ್ಲಿ ಕಾಣಿಸಿಕೊಂಡು, ಪ್ರೇಕ್ಷಕರನ್ನು ರಂಜಿಸುತ್ತಿರುವ ಬಾಲಿವುಡ್ ಕ್ವೀನ್ ಕಂಗನಾ ರನೌತ್ ಹೊಸದಾಗಿ ರಾಮ ಮಂದಿರ-ಬಾಬರಿ ಮಸೀದಿ ವಿಷಯ ಆಧರಿಸಿ ಚಿತ್ರ ನಿರ್ಮಿಸಲು ಸಜ್ಜುಗೊಂಡಿದ್ದಾರೆ.

ಮುಂಬೈ: ವೈವಿಧ್ಯಮಯ ಚಿತ್ರಗಳಲ್ಲಿ ಕಾಣಿಸಿಕೊಂಡು, ಪ್ರೇಕ್ಷಕರನ್ನು ರಂಜಿಸುತ್ತಿರುವ ಬಾಲಿವುಡ್ ಕ್ವೀನ್ ಕಂಗನಾ ರನೌತ್ ಹೊಸದಾಗಿ ರಾಮ ಮಂದಿರ-ಬಾಬರಿ ಮಸೀದಿ ವಿಷಯ ಆಧರಿಸಿ ಚಿತ್ರ ನಿರ್ಮಿಸಲು ಸಜ್ಜುಗೊಂಡಿದ್ದಾರೆ.
ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಸಿದ್ದಪಡಿಸುತ್ತಿರುವ “ಅಪರಾಜಿತ ಆಯೋಧ್ಯೆ” ಹೆಸರಿನ ಚಿತ್ರವನ್ನು ಮುಂದಿನ ವರ್ಷದ ಆರಂಭದಲ್ಲಿ ನಿರ್ಮಿಸಲು ಕಂಗಾನ ಸಿದ್ಧರಾಗುತ್ತಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.
ಮತ್ತೊಂದೆಡೆ, ಕಂಗನಾ ಚಿತ್ರ ನಿರ್ಮಾಪಕಿಯೂ ಆಗಲಿದ್ದಾರೆ ಎಂದು ಸಹೋದರಿ ರಂಗೋಲಿ ಚಂದೇಲ್ ಟ್ವೀಟ್ ಮಾಡಿದ್ದಾರೆ. ಕಂಗನಾ ಅತಿ ಶೀಘ್ರದಲ್ಲಿಯೇ “ಅಪರಾಜಿತ ಅಯೋಧ್ಯೆ” ಯಾಗಿ ಬರಲಿದ್ದಾರೆ. ನಟ ನಟಿಯರು, ತಂತ್ರಜ್ಞರ ಕುರಿತು ಸಧ್ಯದಲ್ಲೇ ಪ್ರಕಟಣೆ ಹೊರಬೀಳಲಿದೆ.
"ಅಪರಾಜಿತ ಅಯೋಧ್ಯೆ ವೈವಿಧ್ಯಮಯ ಚಿತ್ರವಾಗಿದ್ದು, ಸಿನಿಮಾ ನಿರ್ಮಾಣ ವಲಯ ಪ್ರವೇಶಿಸಲು ಇದು ಸರಿಯಾದ ಆರಂಭ ಎಂದು ಕಂಗನಾ ಹೇಳಿದ್ದಾರೆ, ಕಂಗಾನ ರನೌತ್ ಕಡೆಯದಾಗಿ ರಾಜ್ ಕುಮಾರ್ ರಾವ್ ಅವರೊಂದಿಗೆ ಏಕ್ತಾ ಕಪೂರ್ ನಿರ್ಮಿಸಿದ “ಜಡ್ಜ್ ಮೆಂಟಲ್ ಹೈ ಕ್ಯಾ” ಚಿತ್ರ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಮತ್ತೊಂದೆಡೆ, ಅವರು ತಮಿಳುನಾಡು ದಿ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಚರಿತ್ರೆ “ತಲೈವಿ” ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಲೈವಿ ಯಾಗಿ ಕಂಗನಾ ಫಸ್ಟ್‌ಲುಕ್ ಇತ್ತೀಚಿಗೆ ಬಿಡುಗಡೆಗೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


