ಛೀ ಛೀ ಮುಟ್ಟಬೇಡ, ದೂರನಿಲ್ಲು; ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ ಹೇಳಿದ ರಾನು ಮೊಂಡಲ್, ವಿಡಿಯೋ!
ಪ್ರಖ್ಯಾತಿ ಬಂದ ಕೂಡಲೇ ಕೆಲವರು ತಮ್ಮ ವರ್ತನೆಯನ್ನೇ ಬದಲಾಯಿಸಿಕೊಳ್ಳುತ್ತಾರೆ. ಅದೇ ರೀತಿ ಮುಂಬೈನ ಬೀದಿಗಳಲ್ಲಿ ಹಾಡಿ ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿ ಇಂಟರ್ ನೆಟ್ ಸ್ಟಾರ್ ಆಗುತ್ತಿದ್ದಂತೆ...

ಮುಂಬೈ: ಪ್ರಖ್ಯಾತಿ ಬಂದ ಕೂಡಲೇ ಕೆಲವರು ತಮ್ಮ ವರ್ತನೆಯನ್ನೇ ಬದಲಾಯಿಸಿಕೊಳ್ಳುತ್ತಾರೆ. ಅದೇ ರೀತಿ ಮುಂಬೈನ ಬೀದಿಗಳಲ್ಲಿ ಹಾಡಿ ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿ ಇಂಟರ್ ನೆಟ್ ಸ್ಟಾರ್ ಆಗುತ್ತಿದ್ದಂತೆ ಇತ್ತೀಚೆಗೆ ಸೆಲ್ಫಿ ತೆಗೆಸಿಕೊಳ್ಳಲು ಬಂದ ಅಭಿಮಾನಿಗೆ ಡೋಂಟ್ ಟಚ್ ಮಿ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ರಾನು ಮೊಂಡಲ್ ಅವರು ಮಾರ್ಕೆಟ್ ಗೆ ಹೋಗಿದ್ದ ಸಂದರ್ಭದಲ್ಲಿ ಅವರನ್ನು ಗುರುತಿಸಿದ ಮಹಿಳಾ ಅಭಿಮಾನಿಯೊಬ್ಬರು ಅವರ ಹತ್ತಿರ ಬಂದು ಅವರ ಕೈಗಳನ್ನು ಹಿಡಿದು ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗುತ್ತಾರೆ. ಇದರಿಂದ ಕೋಪಗೊಂಡ ರಾನು ಹೀಗೆಲ್ಲಾ ಕೈ ಹಿಡಿದು ಎಳೆಯಬೇಡಿ. ನನ್ನನ್ನು ಮುಟ್ಟಬೇಡಿ ಎಂದೆಲ್ಲಾ ಹೇಳಿದ್ದಾರೆ.
ರಾನು ಮೊಂಡಲ್ ಅವರ ವರ್ತನೆಯನ್ನು ಕಂಡ ಮಹಿಳೆ ನಕ್ಕು ಸುಮ್ಮನ್ನಾಗುತ್ತಾರೆ. ಆದರೆ ರಾನು ಅವರ ವರ್ತನೆಯನ್ನು ಕಂಡ ನೆಟಿಗರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ರಾತ್ರೋರಾತ್ರಿ ಫೇಮಸ್ ಆದರೆ ಅವರ ವರ್ತನೆ ಹೀಗೆ ಆಗುತ್ತದೆ. ರಾನುಗೆ ಅಹಂಕಾರ ಬಂದಿದೆ. ರಾನು ಮೊಂಡಲ್ ಅವರ ಆ್ಯಟಿಟ್ಯೂಡ್ ನೋಡಿ ಎಂದು ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


