ಬಾಕ್ಸ್ ಆಫೀಸ್ನಲ್ಲಿ ಕೇಸರಿ ದರ್ಬಾರ್: 3 ದಿನದ ’ಉರಿ’ ದಾಖಲೆ ಹಿಂದಿಕ್ಕಿದ ಅಕ್ಷಯ್ ಸಿನಿಮಾ!
ಮಾ.21 ರಂದು ಬಿಡುಗಡೆಯಾದ ಕೇಸರಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆ ನಿರ್ಮಿಸಿದ್ದು 3 ದಿನಗಳ ಕಲೆಕ್ಷನ್ ನಲ್ಲಿ ಉರಿ ಸಿನಿಮಾ ದಾಖಲೆಯನ್ನೂ ಹಿಂದಿಕ್ಕಿದೆ.

Published On :
ನವದೆಹಲಿ: ಮಾ.21 ರಂದು ಬಿಡುಗಡೆಯಾದ ಕೇಸರಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆ ನಿರ್ಮಿಸಿದ್ದು 3 ದಿನಗಳ ಕಲೆಕ್ಷನ್ ನಲ್ಲಿ ಉರಿ ಸಿನಿಮಾ ದಾಖಲೆಯನ್ನೂ ಹಿಂದಿಕ್ಕಿದೆ.
2019 ರಲ್ಲಿ ತೆರೆ ಕಂಡ ಬಹುನಿರೀಕ್ಷಿತ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡುತ್ತಿದ್ದು ತೆರೆ ಕಂಡ ಮೂರೇ ದಿನಗಳಲ್ಲಿ 56 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿದೆ.
ಸಿನಿಮಾ ವಿಮರ್ಶಕ, ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಕೇವಲ ಮೂರೇ ದಿನಗಳಲ್ಲಿ 56 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಿದ್ದಾರೆ. 10,000 ಅಫ್ಘನ್ನರ ವಿರುದ್ಧ1897 ರಲ್ಲಿ 21 ಜನರಿದ್ದ ಸಿಖ್ ಸೇನೆ ಸರಗರ್ಹಿ ಯುದ್ಧ ಮಾಡಿದ್ದ ಐತಿಹಾಸಿಕ ಘಟನೆಯನ್ನು ಆಧರಿಸಿ ಕೇಸರಿ ಸಿನಿಮಾವನ್ನು ನಿರ್ಮಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


