ಬಾಲಿವುಡ್

ಮೋದಿನೇ ಸ್ವಾತಂತ್ರ್ಯ ಕೊಡಿಸಿದ್ದು ಅಂತ ತೋರಿಸಬೇಕಿತ್ತು: ಟ್ರೈಲರ್ ಕುರಿತು ಪರೋಕ್ಷವಾಗಿ ಟಾಂಗ್ ಕೊಟ್ಟ ನಟ ಸಿದ್ಧಾರ್ಥ!

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಪಿಎಂ ನರೇಂದ್ರ ಮೋದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಈ ಕುರಿತಂತೆ ಪ್ರತಿಕ್ರಿಯಿಸಿರುವ ನಟ ಸಿದ್ದಾರ್ಥ್ ಎಲ್ಲವನ್ನು ತಾನೇ ಮಾಡಿದ್ದಾಗಿ...

ಮೋದಿನೇ ಸ್ವಾತಂತ್ರ್ಯ ಕೊಡಿಸಿದ್ದು ಅಂತ ತೋರಿಸಬೇಕಿತ್ತು: ಟ್ರೈಲರ್ ಕುರಿತು ಪರೋಕ್ಷವಾಗಿ ಟಾಂಗ್ ಕೊಟ್ಟ ನಟ ಸಿದ್ಧಾರ್ಥ!
ನರೇಂದ್ರ ಮೋದಿ-ಸಿದ್ದಾರ್ಥ್
Published On :
ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಪಿಎಂ ನರೇಂದ್ರ ಮೋದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಈ ಕುರಿತಂತೆ ಪ್ರತಿಕ್ರಿಯಿಸಿರುವ ನಟ ಸಿದ್ದಾರ್ಥ್ ಎಲ್ಲವನ್ನು ತಾನೇ ಮಾಡಿದ್ದಾಗಿ ಹೇಳಿಕೊಳ್ಳುವ ಮೋದಿ ಅವರೇ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಅಂತಾ ಚಿತ್ರದಲ್ಲಿ ತೋರಿಸಬೇಕಿತ್ತು ಎಂದು ಕುಟುಕಿದ್ದಾರೆ.
ರಂಗ್ ದೇ ಬಸಂತಿ ದೇಶಭಕ್ತಿ ಚಿತ್ರದಲ್ಲಿ ನಟಿಸಿದ್ದ ಸಿದ್ಧಾರ್ಥ್ ಇದೀಗ ಪ್ರಧಾನಿ ನರೇಂದ್ರ ಮೋದಿ ಟ್ರೈಲರ್ ಕುರಿತಂತೆ ಟೀಕಿಸಿ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಕೈಯಲ್ಲಿ ಬ್ರಿಟಿಷರನ್ನು ಓಡಿಸಿ ಹೇಗೆ ಸ್ವತಂತ್ರ್ಯವನ್ನು ತಂದುಕೊಟ್ಟರು ಎಂಬುದನ್ನು ತೋರಿಸಲು ಮರೆತಿದ್ದಾರೆ ಅನಿಸುತ್ತದೆ. ಅದನ್ನು ತೋರಿಸಿದ್ದರೆ ಆ ಮೂಲಕ ಜಾತ್ಯಾತೀತತೆ, ಕಮ್ಯೂನಿಸ್ಟ್, ನಕ್ಸಲರ ಮತ್ತು ಜವಾಹರ್ ಲಾಲ್ ನೆಹರೂ ಅವರ ಕಾಲೆಳೆಯಬಹುದು ಎಂದು ಟ್ವೀಟಿಸಿದ್ದಾರೆ.
ಇದೇ ವೇಳೆ ಮತ್ತೊಂದು ಟ್ವೀಟ್ ಮಾಡಿದ್ದು ಅದರಲ್ಲಿ ತಮಿಳುನಾಡು ಸರ್ಕಾರದವನ್ನು ಟೀಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.