ಬಾಲಿವುಡ್

7 ದಿನ ಮುಂಚಿತವಾಗಿಯೇ ತೆರೆಗೆ ಅಪ್ಪಳಿಸಲಿದೆ 'ನರೇಂದ್ರ ಮೋದಿ' ಚಿತ್ರ

ನಿಗದಿತ ದಿನಾಂಕಕ್ಕಿಂತ 7 ದಿನ ಮುಂಚಿತವಾಗಿಯೇ ಪ್ರಧಾನಿ ಮೋದಿ ಜೀವನಾಧಾರಿತ ಚಿತ್ರ 'ನರೇಂದ್ರ ಮೋದಿ' ತೆರಕಾಣಲಿದೆ.

7 ದಿನ ಮುಂಚಿತವಾಗಿಯೇ ತೆರೆಗೆ ಅಪ್ಪಳಿಸಲಿದೆ 'ನರೇಂದ್ರ ಮೋದಿ' ಚಿತ್ರ
ಸಂಗ್ರಹ ಚಿತ್ರ
Published On :
ಮುಂಬೈ: ನಿಗದಿತ ದಿನಾಂಕಕ್ಕಿಂತ 7 ದಿನ ಮುಂಚಿತವಾಗಿಯೇ ಪ್ರಧಾನಿ ಮೋದಿ ಜೀವನಾಧಾರಿತ ಚಿತ್ರ 'ನರೇಂದ್ರ ಮೋದಿ' ತೆರಕಾಣಲಿದೆ.
ಹೌದು.. ಈ ಹಿಂದೆ ನರೇಂದ್ರ ಮೋದಿ ಚಿತ್ರ ಏಪ್ರಿಲ್ 12ಕ್ಕೆ ತೆರೆಕಾಣಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಅದಕ್ಕಿಂತ  7 ದಿನ ಮುಂಚಿತವಾಗಿಯೇ ಅಂದರೆ ಏಪ್ರಿಲ್ 5ರಂದೇ ನರೇಂದ್ರ ಮೋದಿ ಚಿತ್ರ ತೆರೆಗೆ ಅಪ್ಪಳಿಸಿದೆ. ಈ ಬಗ್ಗೆ ಸ್ವತಃ ಚಿತ್ರತಂಡ ಮಾಹಿತಿ ನೀಡಿದ್ದು, ಚಿತ್ರವನ್ನು ಬೇಗ ಬಿಡುಗಡೆ ಮಾಡುವಂತೆ ಜನತೆ ಅಗ್ರಹಿಸಿದ್ದರಿಂದ ಒಂದು ವಾರ ಮುಂಚಿತವಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ. 
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಚಿತ್ರ ನಿರ್ಮಾಪಕ ಸಂದೀಪ್ ಸಿಂಗ್, ಈ ಚಿತ್ರಕ್ಕಾಗಿ ಇಡೀ ದೇಶದ 1.3 ಬಿಲಿಯನ್ ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿ ಅವರನ್ನು ಕಾಯುಸುವುದು ಸರಿಯಲ್ಲ. ಅವರ ಆಗ್ರಹದ ಮೇರೆಗೆ ಚಿತ್ರವನ್ನು ಒಂದು ವಾರ ಮುಂಚಿತವಾಗಿಯೇ ತೆರೆ ಮೇಲೆ ತರಲು ನಿರ್ಧರಿಸಿದ್ದೇವೆ. ಅದರಂತೆ ಏಪ್ರಿಲ್ 5ರಂದೇ ಚಿತ್ರ ತೆರೆಕಾಣಲಿದೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಒಮಂಗ್ ಕುಮಾರ್ ಅವರು, ಇಡೀ ಚಿತ್ರ ನರೇಂದ್ರ ಮೋದಿ ಅವರ ಜೀವನದ ಏಳುಬೀಳಿನ ಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಾಣ ಮಾಡಲಾಗಿದ್ದು, ನರೇಂದ್ರ ಮೋದಿ ಅವರ ಆರಂಭಿಕ ದಿನಗಳು, ಸಿಎಂ ಗಾದಿಯಿಂದ ಪ್ರಧಾನಿ ಗಾದಿ ವರೆಗಿನ ಪ್ರಮುಖ ಘಟನಾವಳಿಗಳನ್ನು ಈ ಚಿತ್ರ ಹೊಂದಿರಲಿದೆ ಎಂದು ಹೇಳಿದ್ದಾರೆ.
ಚಿತ್ರದಲ್ಲಿ ನಟ ವಿವೇಕ್ ಒಬೆರಾಯ್ ಅವರು ನರೇಂದ್ರ ಮೋದಿ ಅವರ ಪಾತ್ರ ನಿರ್ವಹಣೆ ಮಾಡಿದ್ದು, ಚಿತ್ರದಲ್ಲಿ ಬಾಲಿವುಡ್ ಹಿರಿಯ ನಟ ಬೊಮ್ಮನ್ ಇರಾನಿ, ಮನೋಜ್ ಜೋಷಿ, ಪ್ರಶಾಂತ್ ನಾರಾಯಣನ್, ಜರೀನಾ ವಹಾಬ್, ಬರ್ಖಾ ಸೇನ್ ಗುಪ್ತಾ, ಅಂಜನ್ ಶ್ರೀವಾಸ್ತವ್ ಸೇರಿದಂತೆ ಹಲವು ಖ್ಯಾತನಾಮ ನಟರು ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ನರೇಂದ್ರ ಮೋದಿ ಚಿತ್ರ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಏಕಕಾಲದಲ್ಲಿ ತೆರಕಾಣುತ್ತಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.