'ಖಿಲಾಡಿ' ಖ್ಯಾತಿಯ ಬಾಲಿವುಡ್ ನಟ ದಿನ್ಯಾರ್ ಕಂಟ್ರಾಕ್ಟರ್ ನಿಧನ
ಬಾಲಿವುಡ್ ಹಿರಿಯ ನಟ "ಬಾದ್ ಶಾ", "ಖಿಲಾಡಿ" ಖ್ಯಾತಿಯ ದಿನ್ಯಾರ್ ಕಾಂಟ್ರಾಕ್ಟರ್ (79) ಬುಧವಾರ ಬೆಳಿಗ್ಗೆ ಮುಂಬೈನಲ್ಲಿ ನಿಧನರಾದರು.

Published On :
ಮುಂಬೈ: ಬಾಲಿವುಡ್ ಹಿರಿಯ ನಟ "ಬಾದ್ ಶಾ", "ಖಿಲಾಡಿ" ಖ್ಯಾತಿಯ ದಿನ್ಯಾರ್ ಕಾಂಟ್ರಾಕ್ಟರ್ (79) ಬುಧವಾರ ಬೆಳಿಗ್ಗೆ ಮುಂಬೈನಲ್ಲಿ ನಿಧನರಾದರು.
ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ಅವರು ಮರಣಿಸಿದರೆಂದು ಕುಟುಂಬ ಮೂಲಗಳು ಹೇಳಿದೆ. ಇಂದು ಮಧ್ಯಾಹ್ನ 3.30ಕ್ಕೆ ಪಾರ್ಸಿಗಳ ರುದ್ರಭೂಮಿ ವರ್ಲಿಯ ಪ್ರಾರ್ಥನಾ ಸಭಾಂಗಣದಲ್ಲಿ ಕಂಟ್ರಾಕ್ಟರ್ ಅಂತ್ಯ ಸಂಸ್ಕಾರ ನೆರವೇರಲಿದೆ.
ರಂಗಭೂಮಿ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ತಮ್ಮ ಹಾಸ್ಯಮಿಶ್ರಿತ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ಈ ವರ್ಷಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
>
ಪ್ರಧಾನಿ ನರೇಂದ್ರ ಮೋದಿ, ಸಚಿವೆ ಸ್ಮೃತಿ ಇರಾನಿ ಸೇರಿ ಹಲವು ಗಣ್ಯರು ಹಿರಿಯ ನಟನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
He brought bursts of laughter with him wherever he went, he lit up the screen and our lives with his wit & charm. We will miss your presence Dinyar bhai. Rest in Peace Padma Shri Dinyar Contractor - theatre legend, actor par excellence
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
PM Narendra Modiಪ್ರಧಾನಿ ನರೇಂದ್ರ ಮೋದಿDinyar ContractorBaadshahKhiladiದಿನ್ಯಾರ್ ಕಂಟ್ರಾಕ್ಟರ್ಖಿಲಾಡಿಬಾದ್ ಶಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


