ಗಾಯಕ ಕಿಶೋರ್ ಕುಮಾರ್ ಮೊದಲ ಪತ್ನಿ, ಖ್ಯಾತ ನಟಿ ರುಮಾ ಗುಹಾ ವಿಧಿವಶ
ಖ್ಯಾತ ನಟಿ ಹಾಗೂ ಕೊಲ್ಕತ್ತಾದ ಯುವ ಕೋಯಿರ್ ಸಂಸ್ಥಾಪಕಿ ರುಮಾ ಗುಹಾ ಥಕುರ್ತಾ ಸೋಮವಾರ ಬೆಳಗ್ಗೆ ಬ್ಯಾಲಿಗಂಜ್ ನಲ್ಲಿರುವ ತಮ್ಮ ನಿವಾಸದಲ್ಲಿ ...

Published On :
ಕೊಲ್ಕತಾ: ಖ್ಯಾತ ನಟಿ ಹಾಗೂ ಕೊಲ್ಕತ್ತಾದ ಯುವ ಕೋಯಿರ್ ಸಂಸ್ಥಾಪಕಿ ರುಮಾ ಗುಹಾ ಥಕುರ್ತಾ ಸೋಮವಾರ ಬೆಳಗ್ಗೆ ಬ್ಯಾಲಿಗಂಜ್ ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವಯಸ್ಸಾಗಿತ್ತು.
ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, 1934ರಲ್ಲಿ ಕೊಲ್ಕತಾದಲ್ಲಿ ಜನಿಸಿದ್ದರು . 1951ರಲ್ಲಿ ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರೊಂದಿಗೆ ಮದುವೆಯಾಗಿದ್ದರು. ನಂತರ 1960ರಲ್ಲಿ ವಿಚ್ಛೇದನ ನೀಡಿ ಅರುಪ್ ಗುಹಾ ಥಾಕುರ್ತಾ ಅವರನ್ನು ವಿವಾಹವಾಗಿದ್ದರು.
1958ರಲ್ಲಿ ಪ್ರಸಿದ್ಧ ಕೊಲ್ಕತಾ ಯುವ ಕೋಯಿರ್ ಸ್ಥಾಪಿಸಿದ್ದರು. ಅವರು ಅನೇಕ ಬಂಗಾಳಿ ಚಿತ್ರಗಳಲ್ಲಿ ಅಭಿನಯಿಸಿದ್ದು, "ಆಂಟನಿ ಫೈರಿಂಗಿ", "ಗಂಗಾ ಒಭಿಜ್ಜಾನ್", ಹಾಗೂ "ಪಲತಕ್" ಅವರ ಪ್ರಮುಖ ಚಿತ್ರಗಳಾಗಿವೆ. ಹಿನ್ನೆಲೆ ಗಾಯಕಿಯಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


