ಬಾಲಿವುಡ್

ನಿರ್ಮಾಪಕಿಯಾದ ಸ್ವರಾ ಭಾಸ್ಕರ್

ಸ್ವರಾ ಭಾಸ್ಕರ್, "ನಿಲ್ ಬಟ್ಟೆ ಸನ್ನಾಟ", "ಅನಾರ್ಕಲಿ ಆಓ ಅರಾ" ಚಿತ್ರಗಳಿಂಡ ಮನೆಮಾತಾದವರು. ಈಗ ಅವರು ಒಂದು ಹೆಜ್ಜೆ ಮುಂದೆ ಹೋಗಿ ನಟನೆ ಜತೆಗೆ ನಿರ್ಮಾಣ ಕ್ಷೇತ್ರದಲ್ಲಿ ಸಹ ತೊಡಗಿಸಿಕೊಳ್ಳುತ್ತಿದ್ದಾರೆ.

ನಿರ್ಮಾಪಕಿಯಾದ ಸ್ವರಾ ಭಾಸ್ಕರ್
ಸ್ವರಾ ಭಾಸ್ಕರ್
Published On :
ಬೆಂಗಳೂರು: ಸ್ವರಾ ಭಾಸ್ಕರ್, "ನಿಲ್ ಬಟ್ಟೆ ಸನ್ನಾಟ", "ಅನಾರ್ಕಲಿ ಆಓ ಅರಾ" ಚಿತ್ರಗಳಿಂಡ ಮನೆಮಾತಾದವರು. ಈಗ ಅವರು ಒಂದು ಹೆಜ್ಜೆ ಮುಂದೆ ಹೋಗಿ ನಟನೆ ಜತೆಗೆ ನಿರ್ಮಾಣ ಕ್ಷೇತ್ರದಲ್ಲಿ ಸಹ ತೊಡಗಿಸಿಕೊಳ್ಳುತ್ತಿದ್ದಾರೆ. ತಮ್ಮ ಸೋದರ ಇಶಾನ್ ಭಾಸ್ಕರ್ ಅವರೊಡನೆ ಸೇರಿ ಕಹಾನಿವಾಲೆ ಎಂಬ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟು ಹಾಕಿದ್ದಾರೆ.
"ಕಹಾನಿವಾಲೆಯ ಕಲ್ಪನೆ ಇದೇ ಒಂದೂವರೆ ವರ್ಷದಷ್ಟು ಹಳೆಯದು.ಒಳ್ಳೆಯ ಕಥೆ ಇದ್ದರೂ ಸರಿಯಾದ ವ್ವೇದಿಕೆ ಸಿಕ್ಕದ ನಿರ್ದೇಶಕರು, ಚಿತ್ರಕಥೆಗಾರರಿಗೆ ನಮ್ಮ ಕಹಾನಿವಾಲೆ ನಲ್ಲಿ ಅವಕಾಶ ಕಲ್ಪಿಸಲಾಗುತ್ತದೆ" ಸ್ವರಾ ಭಾಸ್ಕರ್ ಹೇಳಿದ್ದಾರೆ.
"ಅಮೃತಾ ಶೇರ್ ಗಿಲ್ ಅವರ ಪುರಾತನ ಚಿತ್ರಕಲೆ ಶೈಲಿ, ಕಥೆ ಹೇಳುವ ಪರಿ ದೆಹಲಿಯ ಮನೆಯಲ್ಲಿ ನನಗೆ, ಸ್ವರಾ ಅವರಿಗೆ ಸ್ಪೂರ್ತಿಯಾಗಿತ್ತು.ಚಿತ್ರಕಲೆಯ ಪ್ರಮುಖ ಕಲ್ಪನೆಯೇ ಕಥೆ ಹೇಳುವುದು.ಇದು ಬಲವಾದ , ತಾಜಾ ಸಂದೇಶವನ್ನು ರವಾನಿಸಲು ಉತ್ತಮ ಮಾರ್ಗ.ಸ್ವಾರಾ ಹಾಗೂ ನಾನು ಇಬ್ಬರೂ ಉತ್ತಮ ಕಥೆಗಳನ್ನು ನೀಡಬೇಕೆಂದು ಅಂದುಕೊಂಡಿದ್ದೆವು. ಹೀಗಾಗಿ ಕಹಾನಿವಾಲೆ ಪ್ರಸ್ತಾಪ ಬಂದಾಗ ನಾವು ಉತ್ಸುಕರಾಗಿ ನಿರ್ಮಾಣ ಸಂಸ್ಥೆ ಸ್ಥಾಪನೆಗೆ ಮುಂಡಾದೆವು" ಸ್ವರಾ ಅವರ ಸೋದರ ಇಶಾನ್ ಭಾಸ್ಕರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.