ಬಾಲಿವುಡ್

ಪಿಎಂ ನರೇಂದ್ರ ಮೋದಿ ಫಸ್ಟ್ ಲುಕ್! ಭಾರತದ 14ನೇ ಪ್ರಧಾನಿ ಪಾತ್ರದಲ್ಲಿ ವಿವೇಕ್ ಒಬೇರಾಯ್

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಲನಚಿತ್ರದ ಫಸ್ಟ್ ಲುಕ್ಸೋಮವಾರ ಬಿಡುಗಡೆಯಾಗಿದ್ದು ಬಾಲಿವುಡ್ ನಟ ವಿವೇಕ್ ಒಬೇರಾಯ್ ಮೋದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪಿಎಂ ನರೇಂದ್ರ ಮೋದಿ ಫಸ್ಟ್ ಲುಕ್! ಭಾರತದ 14ನೇ ಪ್ರಧಾನಿ ಪಾತ್ರದಲ್ಲಿ ವಿವೇಕ್ ಒಬೇರಾಯ್
ಪಿಎಂ ನರೇಂದ್ರ ಮೋದಿ ಫಸ್ಟ್ ಲುಕ್!
Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಲನಚಿತ್ರದ ಫಸ್ಟ್ ಲುಕ್ ಸೋಮವಾರ ಬಿಡುಗಡೆಯಾಗಿದ್ದು ಬಾಲಿವುಡ್ ನಟ ವಿವೇಕ್ ಒಬೇರಾಯ್ ಮೋದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ."ಪಿಎಂ ನರೇಂದ್ರ ಮೋದಿ" ಹೆಸರಿನ ಚಿತ್ರದ ಮೊದಲ ಪೋಸ್ಟರ್ ಇಂದು ಬಿಡುಗಡೆ ಕಂಡಿದೆ.
ದೊಡ್ಡ ಮಟ್ಟದ ಯಶಸ್ಸಿಗೆ ಕಾಯುತ್ತಿರುವ ವಿವೇಕ್ ಗೆ ಈ ಚಿತ್ರ ದೊಡ್ಡ ನೆರವಆಗಲಿದೆ ಎಂದು ಹೇಳಲಾಗಿದ್ದು ಸಿನಿಮಾ ಮಾರುಕಟ್ಟೆ ವಿಶ್ಲೇಷಕರಾದ ತರಣ್ ಆದರ್ಶ್ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಒಬೇರಾಯ್ ಗೆ ವಯಸ್ಸಾದವರಂತೆ ಮೇಕಪ್ ಮಾಡಲಾಗಿದ್ದು ಬಿಳಿ ಕೂದಲು, ಗಡ್ಡ, ಜತೆಗೆ ಚಿನ್ನದ ಬಣ್ಣವಿರುವ ಕುರ್ತಾ ಧರಿಸಿರುವುದನ್ನು ಕಾಣುತ್ತೇವೆ.ಜತೆಗೆ ಹಿನ್ನೆಲೆಯಾಗಿ ಭಾರತ್ ರಾಷ್ಟ್ರಧ್ವಜ, ಸೂರ್ಯೋದಯವಾಗುವ ದೃಶ್ಯವಿದ್ದು ಮೇಲೆ ಹಾಗೂ ಕೆಳಗೆ ಸಿನಿಮಾ ಹೆಸರು, ನಿರ್ಮಾಣ ಸಂಸ್ಥೆಯ ವಿವರಗಳು ಇದೆ.
ಭಾರತದಲ್ಲಿ 23 ಭಾಷೆಗಳಲ್ಲಿ ತೆರೆ ಕಾಣಲಿರುವ ಈ ಚಿತ್ರವನ್ನು "ಮೇರಿ ಕೋಮ್" ಚಿತ್ರದ ಖ್ಯಾತಿ ಒಮಂಗ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.ಸುರೇಶ್ ಒಬೆರಾಯ್ ಮತ್ತು ಸಂದೀಪ್ ಸಿಂಗ್ ಚಿತ್ರಕ್ಕೆ ಬಂಡವಾಳ ತೊಡಗಿಸಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.