ಪಿಎಂ ನರೇಂದ್ರ ಮೋದಿ ಬಯೋಪಿಕ್ ನಲ್ಲಿ ವಿವೇಕ್ ಒಬೇರಾಯ್ ನಟನೆ
ಪ್ರಧಾನಿ ನರೇಂದ್ರ ಮೋದಿ ಅವರ ಬದುಕನ್ನು ಆಧರಿಸಿ ನಿರ್ಮಿಸಲಾಗುವ ಪಿಎಂ ನರೇಂದ್ರ ಮೋದಿ ಬಯೋಪಿಕ್ ಚಿತ್ರದಲ್ಲಿ ಪ್ರತಿಭಾವಂತ ಬಾಲಿವುಡ್ ನಟ ವಿವೇಕ್ ...

Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬದುಕನ್ನು ಆಧರಿಸಿ ನಿರ್ಮಿಸಲಾಗುವ ಪಿಎಂ ನರೇಂದ್ರ ಮೋದಿ ಬಯೋಪಿಕ್ ಚಿತ್ರದಲ್ಲಿ ಪ್ರತಿಭಾವಂತ ಬಾಲಿವುಡ್ ನಟ ವಿವೇಕ್ ಒಬೇರಾಯ್ ಅವರು ಮೋದಿ ಪಾತ್ರದಲ್ಲಿ ನಟಿಸಲಿದ್ದಾರೆ.
ಈಚೆಗೆ ಸ್ವಲ್ಪ ಕಾಲ ಚಿತ್ರರಂಗದಿಂದ ದೂರವಿರುವ ಒಬೆರಾಯ್ ಅವರು ಮೋದಿ ಬಯೋಪಿಕ್ ಚಿತ್ರದಲ್ಲಿ ಮೋದಿ ಪಾತ್ರವನ್ನು ವಹಿಸುವರೆಂಬ ಸುದ್ದಿಯನ್ನು ಖ್ಯಾತ ಚಿತ್ರ ವಿಮರ್ಶಕ ಮತ್ತು ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಮೇರಿ ಕೋಮ್ ಬಯೋಪಿಕ್ ನಿರ್ದೇಶಿಸಿದ್ದ ಉಮಂಗ್ ಕುಮಾರ್ ಮೋದಿ ಬಯೋಪಿಕ್ ಚಿತ್ರವನ್ನು ನಿರ್ದೇಶಿಸಲಿದ್ದು, ಸಂದೀಪ್ ಸಿಂಗ್ ನಿರ್ಮಿಸಲಿದ್ದಾರೆ.
ಚಿತ್ರದ ಮೊದಲ ಪೋಸ್ಟರ್ ಇದೇ ಜನವರಿ 7ರಂದು ಬಿಡುಗಡೆಯಾಗಲಿದೆ. ಚಿತ್ರೀಕರಣ ಇದೇ ಜನವರಿ ತಿಂಗಳ ಮಧ್ಯ ಭಾಗದಿಂದ ಆರಂಭವಾಗಲಿದೆ ಎಂದು ತರಣ್ ಆದರ್ಶ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


