ಅಮೆರಿಕಾದಲ್ಲಿ ಸಿಗತ್ತಂತೆ ದೀಪಿಕಾ ಪಡುಕೋಣೆ ದೋಸೆ! ನಾನು ತಿನ್ನುತ್ತೇನೆ ಎಂದ ರಣವೀರ್
ಇತ್ತೀಚೆಗೆ ವಿವಾಹವಾಗಿರುವ ಬಾಲಿವುಡ್ ಹಾಟ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇದೀಗ ಹನಿಮೂನ್ ಮೂಡಿನಲ್ಲಿದ್ದಾರೆ. ಆದರೆ ವಿಷಯ ಅದಲ್ಲ, ಅಮೆರಿಕಾದಲ್ಲಿನ ಒಂದು....

Published On :
ಮುಂಬೈ: ಇತ್ತೀಚೆಗೆ ವಿವಾಹವಾಗಿರುವ ಬಾಲಿವುಡ್ ಹಾಟ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇದೀಗ ಹನಿಮೂನ್ ಮೂಡಿನಲ್ಲಿದ್ದಾರೆ. ಆದರೆ ವಿಷಯ ಅದಲ್ಲ, ಅಮೆರಿಕಾದಲ್ಲಿನ ಒಂದು ರೆಸ್ಟೋರೆಂಟ್ ದೋಸೆ ಮಾರಾಟಕ್ಕೆ ಮುಂದಾಗಿದ್ದು ಈ ದೋಸೆಗೆ ದೀಪಿಕಾ ಅವರ ಹೆಸರಿಡಲಾಗಿದೆ!
ದೀಪಿಕಾ ಪಡುಕೋಣೆಯವರ ಅಭಿಮಾನಿಯೊಬ್ಬರು ಅಮೆರಿಕಾದ ಟೆಕ್ಸಾಸ್ ನಗರದಲ್ಲಿರುವ ಈ ರೆಸ್ಟೋರೆಂಟ್ ನಲ್ಲಿ ದೀಪಿಕಾ ಹೆಸರಿನ ದೋಸೆ ಮಾರಾಟಕ್ಕಿದೆ ಎಂದು ಅಲ್ಲಿನ ಮೆನು ಕಾರ್ಡ್ ನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ದೋಸೆಯ ಮೇಲೆ ಸ್ಪೈಸಿ ಪೆಪ್ಪರ್ ಜತೆ ಆಲೂಗೆಡ್ಡೆಯನ್ನು ಹಾಕಿರುವ ದೋಸೆಗೆ ನಟಿ ದೀಪಿಕಾ ಅವರ ಹೆಸರಿಡಲಾಗಿದೆ.
ದೀಪಿಕಾ ಪತಿ ರಣವೀರ್ ಸಹ ಈ ಟ್ವೀಟ್ ಶೇರ್ ಮಾಡಿಕೊಂಡಿದ್ದು "ನಾನು ಈ ದೋಸೆಯನ್ನು ತಿನ್ನುತ್ತೇನೆ ಎಂದು ಬರೆದಿದ್ದಾರೆ.
ಹಾಗೆಯೇ ದೀಪಿಕಾಳ ಇನ್ನೋರ್ವ ಅಭಿಮಾನಿ ಪುಣೆಯ ರೆಸ್ಟೋರೆಂಟ್ ಒಂದರಲ್ಲಿ ನಟಿಯ ಹೆಸರಿನ ಪರೋಟಾ ಥಾಲಿ ಸಿಗುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇನ್ನು ಈ ನವಜೋಡಿ ಯಾವ ದೇಶದಲ್ಲಿದ್ದಾರೆ, ಎಂದು ಹಿಂದಿರುಗುತ್ತಾರೆ ಎಂಬ ಯಾವುದೇ ಮಾಹಿತಿ ಇಲ್ಲ. ಆದರೆ ದೀಪಿಕಾ ಶೀಘ್ರದಲ್ಲೇ ಮೇಘನಾ ಗುಲ್ಜಾರ್ ಅವರ 'ಚಪಾಕ್' ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅದರಲ್ಲಿ ಆಕೆ ಆಸಿಡ್ ದಾಳಿಯ ಸಂತ್ರಸ್ಥೆಲಕ್ಷ್ಮಿ ಅಗರ್ವಾಲ್ ಪಾತ್ರವನ್ನು ನಿರ್ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


