ಬಾಲಿವುಡ್

ಕೊಳೆತ ಸ್ಥಿತಿಯಲ್ಲಿ ಬಾಲಿವುಡ್ ನಟ ಆನಂದ್ ಮಹೇಶ್ ಮೃತದೇಹ ಪತ್ತೆ

ಬಾಲಿವುಡ್ ನಟ ಮಹೇಶ್ ಆನಂದ್ ಮುಂಬೈಯಲ್ಲಿನ ತಮ್ಮ ನಿವಾಸದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ

ಕೊಳೆತ ಸ್ಥಿತಿಯಲ್ಲಿ ಬಾಲಿವುಡ್ ನಟ ಆನಂದ್ ಮಹೇಶ್ ಮೃತದೇಹ ಪತ್ತೆ
ಮಹೇಶ್ ಆನಂದ್
Published On :

ಬಾಲಿವುಡ್ ನಟ ಮಹೇಶ್ ಆನಂದ್ ಮುಂಬೈಯಲ್ಲಿನ ತಮ್ಮ ನಿವಾಸದಲ್ಲಿ  ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸರು ಇದು ಆತ್ಮಹತ್ಯೆ ಅಲ್ಲ ಎಂದಿದ್ದಾರೆ. ಅಲ್ಲದೇ, ಆತ್ಮಹತ್ಯೆಗೆ ಸಂಬಂಧಿಸಿದ ಯಾವುದೇ ನೋಟ್ ಗಳು ಕೂಡಾ ದೊರಕಿಲ್ಲ.  

ಕಳೆದ ತಿಂಗಳು ಬಿಡುಗಡೆಯಾದ ಗೋವಿಂದ್ ಅಭಿನಯದ ರಂಗೀಲಾ ರಾಜಾ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದ 57 ವರ್ಷದ ಮಹೇಶ್ ಆನಂದ್ ಮೃತದೇಹ  ಕೊಳೆತ ಸ್ಥಿತಿಯಲ್ಲಿ ಅಂದೇರಿಯಲ್ಲಿನ ಅವರ ಮನೆಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹತ್ತಿರದಲ್ಲಿನ ಕೂಪರ್ ಆಸ್ಪತ್ರೆಗೆ ರವಾನಿಸಲಾಗಿದೆ.

ಕುಡಿತದ ದಾಸನಾಗಿದ್ದ  ಮಹೇಶ್ ಆನಂದ್  ಹೆಂಡತಿ ಮಾಸ್ಕೋದಲ್ಲಿ ವಾಸಿಸುತ್ತಿದ್ದು, ಆತನ ಏಕಾಂಗಿಯಾಗಿ ವಾಸಿಸುತ್ತಿದ್ದ ಎನ್ನಲಾಗಿದೆ. ಆದಾಗ್ಯೂ, ಸಾವಿಗೆ ಕಾರಣ ಏನು ಎಂಬುದು ನಿಖರವಾಗಿ ತಿಳಿದುಬಂದಿಲ್ಲ.
ಮನೆಯಿಂದ ಮೃತದೇಹವನ್ನು ಆಸ್ಪತ್ರೆಗೆ ತಂದಾಗ ಕೊಳತೆ ಸ್ಥಿತಿಯಲ್ಲಿದಿತ್ತು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಸತ್ಯಾಂಶ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.