ಬಾಲಿವುಡ್

ಐ ಲವ್ ರಾಹುಲ್ ಗಾಂಧಿ! ಅವರು ರಾಜನಿದ್ದಂತೆ: ನಟಿ ಮಹಿಕಾ ಶರ್ಮಾ

ಬಾಲಿವುಡ್ ನಟಿ, ರೂಪದರ್ಶಿಯೊಬ್ಬಳು ತಾನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಪ್ರೀತಿಸುತ್ತೇನೆ ಎಂದು ಹೇಳಿಕೊಳ್ಳುವ ಮುಖೇನ ಬಾರೀ ಸದ್ದು ಮಾಡುತ್ತಿದ್ದಾರೆ.

ಐ ಲವ್ ರಾಹುಲ್ ಗಾಂಧಿ! ಅವರು ರಾಜನಿದ್ದಂತೆ: ನಟಿ ಮಹಿಕಾ ಶರ್ಮಾ
ಐ ಲವ್ ರಾಹುಲ್ ಗಾಂಧಿ! ಅವರು ರಾಜನಿದ್ದಂತೆ: ನಟಿ ಮಹಿಕಾ ಶರ್ಮಾ
Published On :
ನವದೆಹಲಿ: ಬಾಲಿವುಡ್ ನಟಿ, ರೂಪದರ್ಶಿಯೊಬ್ಬಳು ತಾನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಪ್ರೀತಿಸುತ್ತೇನೆ ಎಂದು ಹೇಳಿಕೊಳ್ಳುವ ಮುಖೇನ ಬಾರೀ ಸದ್ದು ಮಾಡುತ್ತಿದ್ದಾರೆ. ಅರೆ! ರಾಹುಲ್ ಗೆ ಈ ರೀತಿ "ಐ ಅಲ್ ಯೂ" ಎಂದವರಾರು ಅಂತ ಕೇಳಿದರೆ  ರೂಪದರ್ಶಿ,ನಟಿ ಮಹಿಕಾ ಶರ್ಮಾ ಕೈ ನಾಯಕ ರಾಹುಲ್ ಅವರನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನಟಿ ಮಹಿಕಾ ಈ ಕುರಿತು ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾಳೆ. ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಮಹಿಕಾ ಈ ಸಂಬಂಧ ಪೋಸ್ಟ್ ಮಾಡಿದ್ದಾರೆ.
ರಾಹುಲ್ ಜತೆ ತಮ್ಮ ಫೋಟೋ ಹಂಚಿಕೊಂಡಿರುವ ನಟಿ "ರಾಹುಲ್ ಗಾಂಧಿಗೆ ವಿಚಿತ್ರ ಮಾತುಗಳಿಂದ ಜನರನ್ನು ನಗಿಸುವ ಗುಣವಿದೆ. ಇದಕ್ಕಾಗಿ ಣಾನು ರಾಹುಲ್ ಅವರನ್ನು ಇಷ್ಟಪಡುತ್ತೇನೆ.
"ರಾಜನಾದವ ತನ್ನ ಪ್ರಜೆಗಳನ್ನು ಸದಾ ಸಂತೋಷವಾಗಿರುವಂತೆ ನೋಡಿಕೊಳ್ಳಬೇಕಾದದ್ದು ಧರ್ಮ.ಆ ಗುಣ ರಾಹುಲ್ ಅವರಲ್ಲಿದೆ" ಮಹಿಕಾ ಬರೆದುಕೊಂಡಿದ್ದಾರೆ.
ನಟಿ ಮಹಿಕಾ ಅವರ ಈ ಹೇಳಿಕೆ ಹಾಗೂ ಭಾವಚಿತ್ರಗಳು ಸಾಕಷ್ಟು ಊಹಾಪೋಹಕ್ಕೆ ಕಾರಣವಾಗಿದೆ. ಅಲ್ಲದೆ ಈ ಪೋಸ್ಟ್ ಸಹ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಮಹಿಕಾ ಸಂದೇಶದ ಕುರಿತು ಪರ, ವಿರೋಧ ಚರ್ಚೆಗಳು ನಡೆಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.