ಸ್ಯಾಂಡಲ್‌ವುಡ್ ಆಯ್ತು, ಈಗ ಬಾಲಿವುಡ್‌ನಲ್ಲಿ 'ಕಿರಿಕ್ ಪಾರ್ಟಿ' ಸಂಯುಕ್ತ ಹೆಗ್ಡೆ ಜಗಳ!
ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸ್ಪರ್ಧಿಯಾಗಿದ್ದ ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡಿ ಕಿರಿಕ್ ಮಾಡಿದ್ದ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತ ಹೆಗ್ಡೆ ಇದೀಗ ಬಾಲಿವುಡ್ ನಲ್ಲೂ ಕಿರಿಕ್ ಮಾಡಿ ಸುದ್ದಿಯಾಗಿದ್ದಾರೆ...

Published On :
ಮುಂಬೈ: ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸ್ಪರ್ಧಿಯಾಗಿದ್ದ ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡಿ ಕಿರಿಕ್ ಮಾಡಿದ್ದ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತ ಹೆಗ್ಡೆ ಇದೀಗ ಬಾಲಿವುಡ್ ನಲ್ಲೂ ಕಿರಿಕ್ ಮಾಡಿ ಸುದ್ದಿಯಾಗಿದ್ದಾರೆ.
ಎಂಟಿವಿಯ ಸ್ಪ್ಲಿಟ್ಸ್ ವಿಲ್ಲಾ ಡೇಟಿಂಗ್ ರಿಯಾಲಿಟಿ ಶೋನಲ್ಲಿ ಸಂಯುಕ್ತ ಹೆಗ್ಡೆ ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿಕೊಟ್ಟಿದ್ದರು. ಎಂಟ್ರಿ ಕೊಟ್ಟ ಒಂದೇ ದಿನಕ್ಕೆ ಇತರ ಸ್ಪರ್ಧಿಗಳ ಜತೆ ಜಗಳ ಮಾಡಿಕೊಂಡಿದ್ದಾರೆ.

ಸಂಯುಕ್ತ ಹೆಗ್ಡೆ ಬಿಳಿ ಮತ್ತು ಕಪ್ಪು ಬಣ್ಣದ ಬಿಕಿನಿ ಕೊಟ್ಟು ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟಿದ್ದರು. ಈ ಕಾರ್ಯಕ್ರಮದಲ್ಲಿ ಸಿಂಬಾ ಹಾಗೂ ಮೈರಾ ನಡುವೆ ಲವ್ವಿ ಡವ್ವಿ ನಡೆಯುತ್ತಿತ್ತು. ಇದೀಗ ಸಂಯುಕ್ತ ಅವರ ಎಂಟ್ರಿಯಿಂದ ಸಿಂಬಾ ಕಣ್ಣು ಸಂಯುಕ್ತ ಕಡೆಗೆ ಜಾರಿದೆ. ಇದರಿಂದಾಗಿ ಮೈರಾ ಸಿಟ್ಟು ಮಾಡಿಕೊಂಡಿದ್ದಾರೆ.

ಇದೇ ಅಲ್ಲದೆ ಸಂಯುಕ್ತ ಹೆಗ್ಡೆ ಹಾಗೂ ಮೈರಾ ಇಬ್ಬರು ಮಾತಿನ ಜಗಳ ಮಾಡಿ ಒಬ್ಬರನ್ನೊಬ್ಬರು ನಿಂದಿಸಿಕೊಂಡಿದ್ದಾರೆ. ಒಟ್ಟಾರೆ ಎಂಟ್ರಿ ಕೊಟ್ಟ ಒಂದೇ ದಿನಕ್ಕೆ ಹಲವು ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಶೋನಿಂದ ಹೊರಬರುತ್ತಾರಾ ಇಲ್ಲ ಅಲ್ಲೇ ಉಳಿಯುತ್ತಾರಾ ಎಂಬುದು ಮುಂದಿನ ಎಫಿಸೋಡ್ ನಲ್ಲಿ ಗೊತ್ತಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Samyuktha HegdeSplitsvilla XISimba NagpalMaeraಸ್ಪ್ಲಿಟ್ಸ್ ವಿಲ್ಲಾ ಇಲೆವೆನ್ಸಿಂಬಾ ನಾಗಪಾಲ್ಮೈರಾಸಂಯುಕ್ತ ಹೆಗ್ಡೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


