ರಸ್ತೆ ಅಪಘಾತ: ಬಾಲಿವುಡ್ ಖ್ಯಾತ ಗಾಯಕ ನಿತಿನ್ ಬಾಲಿ ನಿಧನ
ಬಾಲಿವುಡ್ ನ ಖ್ಯಾತ ಗಾಯಕ ನಿತಿನ್ ಬಲಿ ಅ.09 ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Published On :
ಬಾಲಿವುಡ್ ನ ಖ್ಯಾತ ಗಾಯಕ ನಿತಿನ್ ಬಲಿ ಅ.09 ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸ್ಪಾಟ್ಬೋಯ್ ವರದಿಯ ಪ್ರಕಾರ ಮಲಾಡ್ ನಿಂದ ಬೋರಿವಲಿಗೆ ತೆರಳುತ್ತಿದ್ದಾಗ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಿತಿನ್ ಬಾಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು, ಮುಖದ ಮೇಲೆ ಉಂಟಾಗಿದ್ದ ಗಾಯಗಳಿಗೆ ಹೊಲಿಗೆ ಹಾಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಮಲಾಡ್ ಗೆ ತೆರಳುತ್ತಿದ್ದಂತೆಯೇ ರಕ್ತ ವಾಂತಿಯಾಗಿದ್ದು ನಿತಿನ್ ಬಾಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
"ನೀಲೆ ನೀಲೆ ಅಂಬರ್ ಪರ್, "ಚುಕರ್ ಮೇರೆ ಮ್ಯಾನ್ ಕೊ, "ಏಕ್ ಅಜನ್ಬೀ ಹಸೀನಾ ಸೆ" ಮತ್ತು "ಪಲ್ ಪಲ್ ದಿಲ್ ಕೆ ಪಾಸ್" ನಂತಹ ಹಾಡುಗಳ ನಂತಹ ರೀಮಿಕ್ಸ್ ಹಾಡುಗಳನ್ನು ಹಾಡಿದ್ದ ನೀತಿನ್ 1998 ರಲ್ಲಿ ಅವರ ಮೊದಲ ಆಲ್ಬಮ್ ನಾ ಜಾನೆ ಸಾಕಷ್ಟು ಹೆಸರನ್ನು ಗಳಿಸಿತ್ತು. ನೀತಿನ್ ಬಾಲಿ ಕಿರುತೆರೆ ನಟಿ ರೋಮಾ ಬಾಲಿಯನ್ನು ವಿವಾಹವಾಗಿದ್ದರು. ಮೃತ ಗಾಯಕನ ಅಂತ್ಯಕ್ರಿಯೆ ಅ.10 ರಂದು ನಡೆಯಲಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


