ಬಾಲಿವುಡ್

ಮಾಧ್ಯಮಗಳಲ್ಲಿ ನಮ್ಮ ಮದುವೆ ಸಾಕಷ್ಟು ಬಾರಿ ನಡೆದುಹೋಗಿದೆ: ರಣವೀರ್ ಸಿಂಗ್

ಬಾಲಿವುಡ್ ನ ಖ್ಯಾತ ತಾರಾ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮದುವೆ ಬಗ್ಗೆ ಸಾಕಷ್ಟು...

ಮಾಧ್ಯಮಗಳಲ್ಲಿ ನಮ್ಮ ಮದುವೆ ಸಾಕಷ್ಟು ಬಾರಿ ನಡೆದುಹೋಗಿದೆ: ರಣವೀರ್ ಸಿಂಗ್
ದೀಪಿಕಾ ಪಡುಕೋಣೆ-ರಣವೀರ್ ಸಿಂಗ್
Published On :

ಬಾಲಿವುಡ್ ನ ಖ್ಯಾತ ತಾರಾ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಬಂದಿವೆ. ಈ ಜೋಡಿ ಎಲ್ಲೇ ಹೋಗಲಿ, ನಿಮ್ಮ ಮದುವೆ ಯಾವಾಗ, ಎಲ್ಲಿ ನಡೆಯುತ್ತದೆ ಎಂದು ಅವರ ಅಭಿಮಾನಿಗಳು ಕೇಳುತ್ತಾರೆ.

ನಿನ್ನೆ ಕೂಡ ಇದೇ ಪ್ರಶ್ನೆ ಎದುರಾಯಿತು. ಇಂಗ್ಲಿಷ್ ದೈನಿಕವೊಂದರ ನಾಯಕತ್ವ ಶೃಂಗಸಭೆ ಕಾರ್ಯಕ್ರಮ ಸಂವಾದದಲ್ಲಿ ಈ ಜೋಡಿ ಭಾಗವಹಿಸಿತ್ತು. ಆಗ ನಿರೂಪಕಿ ಯಾವಾಗ ನಿಮ್ಮ ಮದುವೆ ಎಲ್ಲಿ, ಅಭಿಮಾನಿಗಳಿಗೆ ಕಾತರ ಹೆಚ್ಚಾಗುತ್ತಿದೆ ಎಂದರು.

ಅದಕ್ಕೆ ಆರಂಭದಲ್ಲಿ ಈ ಜೋಡಿಯಿಬ್ಬರೂ ಒಬ್ಬರನ್ನೊಬ್ಬರನ್ನು ನೋಡಿ ನಕ್ಕರು. ರಣವೀರ್ ಸಿಂಗ್ ಪ್ರತಿಕ್ರಿಯಿಸಿ, ನಮ್ಮ ಮದುವೆ ಬಗ್ಗೆ ಸಾಕಷ್ಟು ವರದಿಗಳು ಮಾಧ್ಯಮಗಳಲ್ಲಿ ಬರುತ್ತವೆ, ಅದನ್ನು ನೀವೆಲ್ಲಾ ಪ್ರತಿದಿನ ನೋಡಿರುತ್ತೀರಿ, ಮದುವೆ ದಿನ ನಾನು ತೊಡುವ ಶೆರ್ವಾನಿಯಿಂದ ಹಿಡಿದು ಧರಿಸುವ ಒಡವೆಗಳು, ಮದುವೆಗೆ ಯಾರ್ಯಾರು ಬರುತ್ತಾರೆ, ಏನೇನು ಗಿಫ್ಟ್ ಗಳನ್ನು ನೀಡುತ್ತಾರೆ ಎಂದೆಲ್ಲಾ ನಿರ್ಧಾರವಾಗಿದೆ. ಮಾಧ್ಯಮಗಳಲ್ಲಿನ ನಮ್ಮ ಸ್ನೇಹಿತರು ಈ ಬಗ್ಗೆ ಎಲ್ಲಾ ಮಾಹಿತಿಗಳನ್ನು ನೀಡುತ್ತಿರುತ್ತಾರೆ. ಆದರೆ ಏನಾದರೂ ಇದ್ದರೆ ನಿಮಗೆ ಮೊದಲು ಗೊತ್ತಾಗುತ್ತದೆ ಎಂದು ಹೇಳಿದರಷ್ಟೇ ಹೊರತು ಮದುವೆ ಯಾವಾಗ, ಎಲ್ಲಿ ಎಂದು ಮಾತ್ರ ಕೊನೆಗೂ ಈ ಜೋಡಿ ಗುಟ್ಟು ಬಿಟ್ಟುಕೊಡಲೇ ಇಲ್ಲ.

ನವೆಂಬರ್ ನಲ್ಲಿ ನಿಗದಿಯಾಗಿದ್ದ ಮದುವೆ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ ಎಂದು ಹೇಳಲಾಗುತ್ತಿದೆ ಅದು ನಿಜವೇ ಎಂದು ನಿರೂಪಕಿ ದೀಪಿಕಾಗೆ ನೇರವಾಗಿ ಕೇಳಿದಾಗ ಅವರು ರಣವೀರ್ ಮುಖ ನೋಡಿ ನಕ್ಕರು. ಆಗ ರಣವೀರ್ ಸಿಂಗ್, ಮಾಧ್ಯಮಗಳಲ್ಲಿ ಬಂದಿರುವ ವರದಿ ಪ್ರಕಾರ ನಾವು ಈಗಾಗಲೇ ಹಲವು ಬಾರಿ ಮದುವೆಯಾಗಿದ್ದೇವೆ, ನಮ್ಮ ಜೀವನದಲ್ಲಿ ಈಗಾಗಲೇ ಹಲವು ವಿಷಯಗಳು ನಡೆದುಹೋಗಿವೆ, ಹಲವು ಬಾರಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದೇವೆ, ಇದನ್ನೆಲ್ಲಾ ಓದುವಾಗ ಖುಷಿಯಾಗುತ್ತದೆ, ಎಷ್ಟು ಸೃಜನಾತ್ಮಕವಾಗಿ ನಮ್ಮ ಬಗ್ಗೆ ಬರೆಯುತ್ತಾರಲ್ಲಾ ಎಂದು ಅನಿಸುತ್ತದೆ ಎಂದು ರಣವೀರ್ ಹೇಳಿದರೇ ಹೊರತು ಈ ಬಗ್ಗೆ ದೀಪಿಕಾ ತುಟಿ ಪಿಟಿಕ್ ಅನ್ನಲಿಲ್ಲ.

ನಂತರ ಇಬ್ಬರೂ ಸಂವಾದದಲ್ಲಿ ತಮ್ಮ ವೃತ್ತಿ ಜೀವನ, ನಟ-ನಟಿಯರಾಗಿ ಒಬ್ಬರನ್ನೊಬ್ಬರು ಹೇಗೆ ಬೆಂಬಲಿಸುತ್ತಾರೆ, ಇಬ್ಬರ ಮೊದಲ ಭೇಟಿ, ಮುಂದುವರಿದ ಸಂಬಂಧಗಳ ಬಗ್ಗೆ ಮಾತನಾಡಿದರು. ಕೊನೆಗೆ ಪ್ರೇಕ್ಷಕರ ಅಪೇಕ್ಷೆ ಮೇರೆಗೆ ಪದ್ಮಾವತ್ ಚಿತ್ರದಲ್ಲಿ ರಣವೀರ್ ಸಿಂಗ್ ರ ಜನಮೆಚ್ಚುಗೆ ಗಳಿಸಿದ ಖಲಿಬಲಿ ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.