ಬಾಲಿವುಡ್

ರಿಲೀಸ್ ಗೂ ಮೊದಲೇ ರಜನಿ 2.0 ಚಿತ್ರಕ್ಕೆ ಎದುರಾಯ್ತು ಕಂಟಕ, ಚಿತ್ರದ ವಿರುದ್ಧ ಸಿಒಎಐನಿಂದ ದೂರು!

ಸೂಪರ್ ಸ್ಚಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ 2.0 ಚಿತ್ರಕ್ಕೆ ರಿಲೀಸ್ ಗೂ ಮೊದಲೇ ಕಂಟಕ ಎದುರಾಗಿದ್ದು, ಸೆಲ್ಯುಲರ್‌ ಆಪರೇಟರ್ಸ್‌ ಅಸೋಸಿಯೇಷನ್‌ (ಸಿಒಎಐ) ಸಂಸ್ಥೆ ದೂರು ದಾಖಲಿಸಿದೆ.

ರಿಲೀಸ್ ಗೂ ಮೊದಲೇ ರಜನಿ 2.0 ಚಿತ್ರಕ್ಕೆ ಎದುರಾಯ್ತು ಕಂಟಕ, ಚಿತ್ರದ ವಿರುದ್ಧ ಸಿಒಎಐನಿಂದ ದೂರು!
ಸಂಗ್ರಹ ಚಿತ್ರ
Published On :
ನವದೆಹಲಿ: ಸೂಪರ್ ಸ್ಚಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ 2.0 ಚಿತ್ರಕ್ಕೆ ರಿಲೀಸ್ ಗೂ ಮೊದಲೇ ಕಂಟಕ ಎದುರಾಗಿದ್ದು, ಸೆಲ್ಯುಲರ್‌ ಆಪರೇಟರ್ಸ್‌ ಅಸೋಸಿಯೇಷನ್‌ (ಸಿಒಎಐ) ಸಂಸ್ಥೆ ದೂರು ದಾಖಲಿಸಿದೆ.
2.0 ಸಿನಿಮಾದಲ್ಲಿ ವೈಜ್ಞಾನಿಕ ವಿರೋಧಿ ಅಂಶಗಳಿವೆ ಎಂದು ಸೆಲ್ಯುಲರ್‌ ಆಪರೇಟರ್ಸ್‌ ಅಸೋಸಿಯೇಷನ್‌ ಸಂಸ್ಥೆ ತನ್ನ ದೂರಿನಲ್ಲಿ ಆರೋಪಿಸಿದ್ದು, ಈ ಸಂಬಂಧ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಹಾಗೂ ಸೆನ್ಸಾರ್‌​ ಬೋರ್ಡ್​ಗೆ ಈ ಸಂಬಂಧ ಲಿಖಿತ ದೂರನ್ನು ನೀಡಲಾಗಿದೆ. ಚಿತ್ರದಲ್ಲಿ ಮೊಬೈಲ್‌ ಬಳಕೆ ಬಗ್ಗೆ ಎಚ್ಚರಿಕೆ ನೀಡಿದ್ದು, ಇದು ವೈಜ್ಞಾನಿಕ ವಿರೋಧಿ ಅಂಶಗಳನ್ನು ಒಳಗೊಂಡಿದೆ ಎಂದು ದೂರು ದಾಖಲಿಸಲಾಗಿದೆ. 
ಈ ಜಗತ್ತು ಕೇವಲ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ-ಪಕ್ಷಿಗಳು ಜೀವಿಸೋಕೆ ಅಂತಾ ಹೇಳಲು ಹೊರಟಿದ್ದಾರೆ. ಆದರೆ, ಈ ವೇಳೆ ಮೊಬೈಲ್​ ಹಾಗೂ ಅದರ ಟವರ್ ಗಳಿಂದ ಪಕ್ಷಿಗಳಿಗೆ ಹಾನಿಯಾಗುತ್ತೆ ಅಂತಾನೂ ಬಿಂಬಿಸಲಾಗಿದೆ. ಇದು ವಿಜ್ಞಾನ ವಿರೋಧಿ ಮನೋಭಾವವನ್ನು ತೋರುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಚಿತ್ರದ ಟೀಸರ್‌, ಟ್ರೈಲರ್‌, ಪ್ರಮೋಷನಲ್‌ ವಿಡಿಯೋಗಳು ಕೂಡಾ ಇದನ್ನೇ ಉತ್ತೇಜಿಸುವಂತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಇದೇ ಕಾರಣಕ್ಕೆ ಚಿತ್ರದ ಪ್ರದರ್ಶವನ್ನು ತಡೆಹಿಡಿಯಬೇಕು ಎಂದು ಸೆಲ್ಯುಲರ್‌ ಆಪರೇಟರ್ಸ್‌ ಅಸೋಸಿಯೇಷನ್‌ ಮನವಿ ಮಾಡಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.