ಅಕ್ಷರಾ ಹಾಸನ್ 'ಟೂ ಪೀಸ್' ಲೀಕ್ ಹಿಂದೆ ಬಹುಭಾಷಾ ನಟಿ ಮಗನ ಕೈವಾಡ?
ತಮಿಳು ನಟ ಕಮಲ್ ಹಾಸನ್ ದ್ವಿತೀಯ ಪುತ್ರಿ ನಟಿ ಅಕ್ಷರಾ ಹಾಸನ್ ಅವರ ಖಾಸಗಿ ಫೋಟೋಗಳ ಲೀಕ್ ಹಿಂದೆ ಬಹುಭಾಷಾ ನಟಿಯೊಬ್ಬರ ಮಗನ ಕೈವಾಡವಿರುವುದಾಗಿ ಪೊಲೀಸರು ಶಂಕಿಸಿದ್ದಾರೆ...

Published On :
ಮುಂಬೈ: ತಮಿಳು ನಟ ಕಮಲ್ ಹಾಸನ್ ದ್ವಿತೀಯ ಪುತ್ರಿ ನಟಿ ಅಕ್ಷರಾ ಹಾಸನ್ ಅವರ ಖಾಸಗಿ ಫೋಟೋಗಳ ಲೀಕ್ ಹಿಂದೆ ಬಹುಭಾಷಾ ನಟಿಯೊಬ್ಬರ ಮಗನ ಕೈವಾಡವಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ತಮ್ಮ ಖಾಸಗಿ ಫೋಟೋಗಳು ಲೀಕ್ ಆದ ಬಳಿಕ ಅಕ್ಷರ ಹಾಸನ್ ಸೈಬರ್ ಪೊಲೀಸರ ಮೊರೆ ಹೋಗಿದ್ದರು. ತನಿಖೆಯ ನಂತರ ಅಕ್ಷರಾ ಹಾಸನ್ ಅವರ ಮಾಜಿ ಪ್ರಿಯಕರ ತನುಜ್ ವಿರ್ವಾನಿಯ ಕೈವಾಡವಿದ್ದು ಅವರನ್ನು ತೀವ್ರ ವಿಚಾರಣೆ ನಡೆಸಿದ್ದಾರೆ.
ಅಕ್ಷರಾ ಹಾಸನ್ 2013ರವರೆಗೂ ಐಫೋನ್ 6 ಬಳಸುತ್ತಿದ್ದು ಸದ್ಯ ಲೀಕ್ ಆಗಿರುವ ಫೋಟೋಗಲು ಅದರಲ್ಲೇ ಇತ್ತಂತೆ. ಈ ಫೋನ್ ನಿಂದಿಲೇ ಈ ಚಿತ್ರಗಳನ್ನು ಅಕ್ಷರಾ ತನ್ನ ಮಾಜಿ ಪ್ರಿಯಕರ ತನುಜ್ ಗೂ ಕಳುಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ತನುಜ್ ಬಹುಭಾಷಾ ನಟಿ ರತಿ ಅಗ್ನಿಹೋತ್ರಿ ಪುತ್ರ.
2016ರಲ್ಲಿ ಅಕ್ಷರಾ ಹಾಗೂ ತನುಜ್ ದೂರವಾಗಿದ್ದರು. ಅಲ್ಲಿಯವರೆಗೂ ತನುಜ್ ಫೋನ್ ನಲ್ಲಿ ಈ ಚಿತ್ರಗಳು ಇದ್ದವಂತೆ. ಆದರೆ ತನುಜ್ ಫೋಟೋಗಳನ್ನು ಲೀಕ್ ಮಾಡಿರುವ ಬಗ್ಗೆ ಸ್ಪಷ್ಟ ಸಾಕ್ಷಿ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸಾಮಾಜಿಕ ಜಾಲತಾಣonlineKollywoodಕಾಲಿವುಡ್leakಲೀಕ್Akshara Haasanಅಕ್ಷರಾ ಹಾಸನ್Private Picturesಖಾಸಗಿ ಫೋಟೋTanuj Virwaniತನುಜ್ ವಿರ್ವಾನಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


