’ಸಂಜು’ ಚಿತ್ರದ ಟ್ರೇಲರ್ ಬಿಡುಗಡೆ: ಸಂಜಯ್ ದತ್ ಪಾತ್ರದಲ್ಲಿ ರಣಬೀರ್ ಕಪೂರ್ ಮಿಂಚು
ಬಾಲಿವುಡ್ ನಟ ಸಂಜಯ್ ದತ್ ಜೀವ ಕಥೆಯಾಧಾರಿತ ಚಿತ್ರ ’ಸಂಜು’ ಟ್ರೇಲರ್ ಬಿಡುಗಡೆಯಾಗಿದೆ. ಸಂಜಯ್ ದತ್ ಪಾತ್ರದಲ್ಲಿ ರಣಬೀರ್ ಕಪೂರ್ ಮಿಂಚಿದ್ದಾರೆ.

Published On :
ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಜೀವನ ಕಥೆಯಾಧಾರಿತ ಚಿತ್ರ ’ಸಂಜು’ ಟ್ರೇಲರ್ ಬಿಡುಗಡೆಯಾಗಿದ್ದು, ಸಂಜಯ್ ದತ್ ಪಾತ್ರದಲ್ಲಿ ರಣಬೀರ್ ಕಪೂರ್ ಮಿಂಚಿದ್ದಾರೆ.
ಬಾಲಿವುಡ್ ಗೆ ಪದಾರ್ಪಣೆ ಮಾಡಿದಂದಿನೊಂದ 2016 ರಲ್ಲಿ ಜೈಲಿನಿಂದ ಬಿಡುಗಡೆಯಾದ ಸಮಯದವರೆಗೆ ಸಂಜಯ್ ದತ್ ಜೀವನ ಕಥೆಯನ್ನು ಚಿತ್ರ ಒಳಗೊಂಡಿದೆ. ಮನಿಷಾ ಕೊಯಿರಾಲಾ ಸಂಜಯ್ ದತ್ ತಾಯಿ ನರ್ಗೀಸ್ ಪಾತ್ರದಲ್ಲಿ, ಪರೇಶ್ ರಾವಲ್, ಸುನೀಲ್ ದತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಅವರ ಪತ್ನಿ ಮಾನ್ಯತಾ ದತ್ ಪಾತ್ರದಲ್ಲಿ ದಿಯಾ ಮಿರ್ಜಾ ಇದ್ದಾರೆ.
ಸೋನಮ್ ಕಪೂರ್ ಪ್ರೀತಿಪಾತ್ರಳಾದರೆ, ವಿಕ್ಕಿ ಕೌಶಾಲ್ ಆತ್ಮೀಯ ಗೆಳೆಯರಾಗಿ ತೆರೆ ಹಂಚಿಕೊಂಡಿದ್ದಾರೆ.ಅನುಷ್ಕಾ ಶರ್ಮಾ, ಕರೀಶ್ಮಾ ತನ್ನಾ, ಜಿಮ್ ಸರ್ಬ್ ಸಹ ಚಿತ್ರದಲ್ಲಿದ್ದಾರೆ.
ಒನ್ ಮ್ಯಾನ್...ಮೆನಿ ಲೈವ್ಸ್ ಅಡಿ ಬರಹದ ಈ ಚಿತ್ರ ರಾಜ್ ಕುಮಾರ್ ಹಿರಾನಿ ನಿರ್ದೇಶನದಲ್ಲಿ ಮೂಡಿಬಂದಿದೆ. ಜೂನ್ 29ಕ್ಕೆ ಸಂಜು ತೆರೆ ಮೇಲೆ ಬರಲಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


