ತಾಯಿ ತೀರಿಕೊಂಡ ಮೂರು ವರ್ಷಗಳ ನಂತರ ಕಣ್ಣೀರು ಹಾಕಿದ್ದ ಸಂಜಯ್ ದತ್
ತಾಯಿ ನರ್ಗಿಸ್ ಮಡಿದಾಗ ಬಾಲಿವುಡ್ ನಟ ಸಂಜಯ್ ದತ್ ಅತ್ತೇ ಇರಲಿಲ್ಲವಂತೆ. ಮೂರು ವರ್ಷಗಳ ...

ನವದೆಹಲಿ: ತಾಯಿ ನರ್ಗಿಸ್ ಮಡಿದಾಗ ಬಾಲಿವುಡ್ ನಟ ಸಂಜಯ್ ದತ್ ಅತ್ತೇ ಇರಲಿಲ್ಲವಂತೆ. ಮೂರು ವರ್ಷಗಳ ನಂತರ ಒಂದು ದಿನ ತನ್ನ ತಾಯಿಯ ಕೊನೆಯ ದಿನಗಳಲ್ಲಿನ ಆಸೆಯನ್ನು ಹೇಳಿಕೊಂಡ ಆಡಿಯೊ ಟೇಪ್ ಸಿಕ್ಕಿದಾಗ ಅವರೊಳಗಿನ ನೋವು ಒಮ್ಮೆಲೆ ಉಲ್ಬಣಗೊಂಡು ಹೊರಬಂದು ಅತ್ತೇಬಿಟ್ಟರಂತೆ.
ಇದು ಸಂಜಯ್ ದತ್ ಅವರ ಬಗ್ಗೆ ಬರೆದಿರುವ ''ಸಂಜಯ್ ದತ್: ದ ಕ್ರೇಜಿ ಅನ್ ಟೋಲ್ಡ್ ಸ್ಟೋರಿ ಆಫ್ ಬಾಲಿವುಡ್ಸ್ ಬಾಡ್ ಬಾಯ್'' ನಲ್ಲಿ ನಮೂದಾಗಿದೆ. ಇದರ ಲೇಖಕ ಯಾಸ್ಸಿರ್ ಉಸ್ಮಾನ್ ಸಂಜಯ್ ದತ್ ಅವರ ಬದುಕಿನ ಹಲವು ಮಗ್ಗಲುಗಳನ್ನು ನಮೂದಿಸಿದ್ದಾರೆ. ಜುಗ್ಗರ್ನಾಟ್ ಪ್ರಕಟಿಸಿರುವ ಈ ಪುಸ್ತಕದಲ್ಲಿ ಸಂಜಯ್ ದತ್ ಅವರ ಜೀವನದಲ್ಲಿ ಬಂದ ಹಲವು ಮಹಿಳೆಯರು, ಡ್ರಗ್ಸ್ ಮೇಲಿನ ವ್ಯಾಮೋಹ, ಮಾನಿಟರ್ ಹಲ್ಲಿನ ರಕ್ತವನ್ನು ಕುಡಿಯುವುದು ಮತ್ತು ಅವರ ಮನೆಯೊಳಗೆ ಒಂದು ಅನಾಮಿಕ ರಾತ್ರಿ ಚಿತ್ರೀಕರಣ ನಡೆಸಿದ್ದು ಇತ್ಯಾದಿಗಳನ್ನು ಹೇಳಿದ್ದಾರೆ.
ಸಂಜಯ್ ದತ್ ಅವರ ತಾಯಿ ನರ್ಗಿಸ್ ಸತ್ತಿದ್ದು ಮೇ, 3, 1981ರಂದು. ಕ್ಯಾನ್ಸರ್ ನಿಂದ ಮಡಿದ ನರ್ಗಿಸ್ ಸಾಯುವ ಹೊತ್ತಿಗೆ ಸಂಜಯ್ ಅವರ ಚಿತ್ರ ರಾಕಿ ಬಿಡುಗಡೆಯಾಗಿತ್ತು. ತನ್ನ ತಾಯಿ ಸತ್ತಾಗ ಸಂಜಯ್ ದತ್ ಅತ್ತಿರಲಿಲ್ಲ. ನರ್ಗಿಸ್ ಸತ್ತು ಮೂರು ವರ್ಷ ಕಳೆದ ನಂತರ ಒಮ್ಮೆಲೆ ಅಳು ಸ್ಫೋಟಗೊಂಡು ಹೊರಗೆ ಬಂದಿತು. ಅಲ್ಲಿಯವರೆಗೆ ಗಾಯದಂತೆ ಹಾಗೆಯೇ ಉಳಿದಿತ್ತು.
ತಾಯಿ ಸಾವಿಗೀಡಾದ ನಂತರ ಸಂಜಯ್ ದತ್ ಅಮೆರಿಕಾದ ಡ್ರಗ್ಸ್ ಪುನರ್ವಸತಿ ಕೇಂದ್ರದಲ್ಲಿದ್ದರು. ಆಗ ತಂದೆ ಸುನಿತ್ ದತ್ ಪತ್ನಿಯ ಕೊನೆಯ ಆಸೆಗಳಿರುವ ಟೇಪುಗಳನ್ನು ಸಂಜಯ್ ದತ್ ಗೆ ಕಳುಹಿಸಿದ್ದರು.ಅದರಲ್ಲಿ ತನ್ನ ಮಗ ಡ್ರಗ್ಸ್ ವ್ಯಸನದಿಂದ ಹೊರಬರಬೇಕೆಂಬುದಿತ್ತು. ಅದನ್ನು ಕೇಳಿ ಸಂಜಯ್ ದತ್ ಗೆ ದುಃಖ ತಡೆಯಲಾಗಲಿಲ್ಲ. ಆಗಲೇ ಸಂಜಯ್ ದತ್ ಗೆ ತನ್ನ ತಾಯಿ ತನ್ನನ್ನು ಎಷ್ಟು ಪ್ರೀತಿಸುತ್ತಿದ್ದಳು, ತಾನು ಆಕೆಗೆ ಎಷ್ಟು ಮುಖ್ಯವಾಗಿತ್ತು ಎಂಬುದು ಗೊತ್ತಾಗಿದ್ದು ಎಂದು ಯಸ್ಸಿರ್ ಪುಸ್ತಕದಲ್ಲಿ ಬರೆದಿದ್ದಾರೆ.
ತಾಯಿಯ ಮಾತುಗಳುಳ್ಳ ಆಡಿಯೊ ಟೇಪುಗಳನ್ನು ಕೇಳಿ ನಾಲ್ಕು ದಿನಗಳ ಕಾಲ ಕೋಣೆಯಲ್ಲಿ ಕುಳಿತುಕೊಂಡು ಸಂಜಯ್ ದತ್ ನಿರಂತರವಾಗಿ ಅತ್ತಿದ್ದರಂತೆ. ತನ್ನ ತಾಯಿ ಮತ್ತೆಂದೂ ಬದುಕಿ ಬಾರಳು ಎಂದು ಗೊತ್ತಿದ್ದರೂ ಸಂಜಯ್ ಮನಸ್ಸು ತಾಯಿಗಾಗಿ ಹಾತೊರೆಯುತ್ತಿದ್ದಂತೆ. ಅದುವೇ ಸಂಜಯ್ ದತ್ ಬದುಕಿನಲ್ಲಿ ತಿರುವಿಗೆ ಕಾರಣವಾಯಿತು ಎಂದು ವಿವರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


