ಬಾಲಿವುಡ್

ಸನ್ನಿ ಲಿಯೋನ್ ಕುಟುಂಬಕ್ಕೆ ಈಗ ಎರಡು ಮುದ್ದಾದ ಗಂಡು ಮಕ್ಕಳ ಸೇರ್ಪಡೆ!

ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಕುಟುಂಬಕ್ಕೆ ಈಗ ಎರಡು ಮುದ್ದಾದ ಗಂಡು ಮಕ್ಕಳ ಸೇರ್ಪಡೆಯಾಗಿದೆ.

ಸನ್ನಿ ಲಿಯೋನ್ ಕುಟುಂಬಕ್ಕೆ ಈಗ ಎರಡು ಮುದ್ದಾದ ಗಂಡು ಮಕ್ಕಳ ಸೇರ್ಪಡೆ!
ಮೂವರು ಮಕ್ಕಳು ಹಾಗೂ ಪತಿಯೊಂದಿಗೆ ಸನ್ನಿ ಲಿಯೋನ್
Published On :

ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಕುಟುಂಬಕ್ಕೆ ಈಗ ಎರಡು ಮುದ್ದಾದ ಗಂಡು ಮಕ್ಕಳ ಸೇರ್ಪಡೆಯಾಗಿದೆ. ಸನ್ನಿ ಲಿಯೋನ್ ಹಾಗೂ ಆಕೆಯ ಪತಿ ಮೂವರು ಮಕ್ಕಳೊಂದಿಗಿರುವ ಪೋಟೋವೊಂದನ್ನು ಟ್ವೀಟರ್ ನಲ್ಲಿ ಹಾಕಿದ್ದಾರೆ.

ಸನ್ನಿ ಲಿಯೋನ್ ಪತಿ ವೆಬರ್ ಕಳೆದ ವರ್ಷ ಜೂನ್ ನಲ್ಲಿ ನಿಶಾ ಕೌರ್ ಎಂಬ ಬಾಲಕಿಯನ್ನು ದತ್ತು ಪಡೆದುಕೊಂಡಿದ್ದರು.ಆದರೆ, ಈ ಪೋಟೋದಲ್ಲಿ ನಿಶಾ ಜೊತೆಗೆ ಸನ್ನಿ ಲಿಯೋನ್ ಹಾಗೂ ಡೇವಿಡ್ ವೆಬರ್ ಎರಡು ಮಕ್ಕಳನ್ನು ಹಿಡಿದು ಕುಳಿತಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಸನ್ನಿ ಲಿಯೋನ್, ತನ್ನ ಪತಿಯ ಆಪೇಕ್ಷೆಯಂತೆ ಮೂವರು ಮಕ್ಕಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಇದರ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಟ್ವೀಟ್ ಮಾಡಿರುವ ಸನ್ನಿ, ಇವು ನಾವು ಹೆತ್ತ ಮಕ್ಕಳೇ. ಬಹಳ ವರ್ಷಗಳ ಹಿಂದೆಯೇ ನಾನು ಮತ್ತು ನನ್ನ ಪತಿ ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಹೆರಲು ನಿರ್ಧರಿಸಿದ್ದೆವು.  ಹಲವು ವರ್ಷಗಳ ನಂತರ ಈಗ ನಮ್ಮ ಕುಟುಂಬ ಯೋಜನೆ ಪೂರ್ಣಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಮಕ್ಕಳಿಗೆ ಅಶರ್ ಸಿಂಗ್ ವೆಬರ್ ಮತ್ತು ನೋಹ್ ಸಿಂಗ್ ವೆಬರ್ ಎಂದು ಹೆಸರಿಸಲಾಗಿದೆ. ಕೆಲ ವಾರದ ಹಿಂದೆಯೇ ಈ ಮಕ್ಕಳು ಜನ್ಮ ತಾಳಿದ್ದವು. ಆದರೆ ಈಗ ನಮ್ಮ ಕುಟುಂಬಕ್ಕೆ ಸೇರಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.