ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ಸಂಜೂ, ಸಲ್ಮಾನ್ರ ರೇಸ್ 3 ದಾಖಲೆ ಉಡೀಸ್!
ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನಾಧಾರಿತ ಸಂಜೂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ...

Published On :
ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನಾಧಾರಿತ ಸಂಜೂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.
ನಟ ರಣಬೀರ್ ಕಪೂರ್ ಸಂಜತ್ ದತ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಿನ್ನೆ ಬಿಡುಗಡೆಯಾದ ಸಂಜೂ ಚಿತ್ರ ಮೊದಲ ದಿನವೇ 34.75 ಕೋಟಿ ಕಲೆಕ್ಷನ್ ಮಾಡಿದ್ದು ಆ ಮೂಲಕ ಸಲ್ಮಾನ್ ಖಾನ್ ಅಭಿನಯದ ರೇಸ್ 3 ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರದ ದಾಖಲೆಗಳನ್ನು ಊಡೀಸ್ ಮಾಡಿದೆ.
ಯಾವುದೇ ರಜೆ ಇಲ್ಲದ, ಹಬ್ಬವಿಲ್ಲದ ದಿನ ಬಿಡುಗಡೆಯಾದರೂ ಸಂಜೂ ಚಿತ್ರ ಮಾತ್ರ ಬಾಲಿವುಡ್ ನ ಬಾಕ್ಸ್ ಆಫೀಸ್ ನಲ್ಲಿ ಧೂಳೆಬಿಸಿದ್ದು ಇದೇ ವೇಗ ಮುಂದುವರೆದರೆ ಮೊದಲ ವೀಕೆಂಡ್ ನಲ್ಲಿ 100 ಕೋಟಿ ಗಡಿ ದಾಟುವುದರಲ್ಲಿ ಯಾವುದೇ ಸಂಶಯವಿಲ್ಲ.
ಪದ್ಮಾವತ್ ಚಿತ್ರ ಮೊದಲ ದಿನ 17.75 ಕೋಟಿ ಹಾಗೂ ರೇಸ್ 3 ಚಿತ್ರ 27.50 ಕೋಟಿ ರುಪಾಯಿ ಗಳಿಸಿತ್ತು. ಈ ವರ್ಷ ತೆರೆ ಕಂಡ ಚಿತ್ರಗಳ ಪೈಕಿ ಸಂಜೂ ಚಿತ್ರ ಮೊದಲ ದಿನದ ಕಲೆಕ್ಷನ್ ನಲ್ಲಿ ಮುಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Salman Khanಸಲ್ಮಾನ್ ಖಾನ್Ranbir KapoorBollywoodಬಾಲಿವುಡ್ರಣಬೀರ್ ಕಪೂರ್Sanjay Duttಸಂಜಯ್ ದತ್ರೇಸ್ 3SanjuRace3ಸಂಜೂ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


