ನಟ ಅರ್ಮಾನ್ ಕೊಹ್ಲಿ ವಿರುದ್ಧದ ಎಫ್ಐಆರ್ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್
ತನ್ನ ಗೆಳತಿಯ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ವಿರುದ್ಧ ದಾಖಲಾಗಿದ್ದ...

Published On :
ಮುಂಬೈ: ತನ್ನ ಗೆಳತಿಯ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಶುಕ್ರವಾರ ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ.
ಕೊಹ್ಲಿ ತನ್ನ ಗೆಳತಿ, ರೂಪದರ್ಶಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಪಶ್ಚಾತ್ತಾಪ ಮತ್ತು ವಿಷಾದ ವ್ಯಕ್ತಪಡಿಸಿ ಹೈಕೋರ್ಟ್ ಇಂದು ಅಫಿಡವಿಟ್ ಸಲ್ಲಿಸಿದ ಹಿನ್ನೆಲೆಯಲ್ಲಿ ಕೋರ್ಟ್ ನಟನ ವಿರುದ್ಧದ ಎಫ್ ಐಆರ್ ಅನ್ನು ರದ್ದುಗೊಳಿಸಿದೆ.
ಅರ್ಮಾನ್ ಕೊಹ್ಲಿಯ ಗೆಳತಿ ನೀರೂ ರಾಧಾವಾನ್ ಅವರು ಸಹ ಪ್ರಕರಣ ಮುಂದುವರೆಸಲು ಬಯಸದ ಹಿನ್ನೆಲೆಯಲ್ಲಿ ಸಂತ್ರಸ್ಥೆಯ ಒಪ್ಪಿಗೆ ಮೆರೆಗೆ ಕೋರ್ಟ್ ಎಫ್ ಐಆರ್ ರದ್ದುಗೊಳಿಸುತ್ತಿರುವುದಾಗಿ ಹೇಳಿದೆ.
ನೀರೂ ರಾಧಾವಾನ್ ನೀಡಿರುವ ದೂರಿನ ಆಧಾರದ ಮೇಲೆ ಕಳೆದ ಮಂಗಳವಾರ ಅರ್ಮಾನ್ ಕೊಹ್ಲಿಯನ್ನು ಬಂಧಿಸಲಾಗಿತ್ತು.
ಮುಂಬೈನ ಸ್ಯಾಂಟಕ್ರೂಜ್ ಜಾಲೀಸ್ ಠಾಣೆಯಲ್ಲಿ ಅರ್ಮಾನ್ ಕೊಹ್ಲಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಹಲ್ಲೆ ನಂತರ ಆಸ್ಪತ್ರೆಗೆ ದಾಖಲಾಗಿದ್ದ ನೀರೂ ರಾಧಾವಾನ್ ಕೊಹ್ಲಿ, ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾನೆ ಎಂದು ದೂರು ನೀಡಿದ್ದರು. ಅರ್ಮಾನ್ ಕೊಹ್ಲಿ ಅವರು ಖ್ಯಾತ ನಿರ್ಮಾಪಕ ರಾಜ್‍ಕುಮಾರ್ ಕೊಹ್ಲಿಯ ಪುತ್ರನಾಗಿದ್ದು, ವಿರೋಧಿ ಚಿತ್ರದ ಮೂಲಕ ಬಣ್ಣ ಹಚ್ಚಿದ ಕೊಹ್ಲಿ ನಂತರ ಜಾನಿ ದುಶ್ಮನ್, ಎಲ್‍ಒಸಿ ಕಾರ್ಗಿಲ್ ಚಿತ್ರಗಳಲ್ಲಿ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


