ಬಾಲಿವುಡ್

ಕೊನೆಗೂ ತನ್ನ ಆರಾಧ್ಯ ನಟ ಗೋವಿಂದರನ್ನು ಭೇಟಿ ಮಾಡಿದ ಡ್ಯಾನ್ಸಿಂಗ್ ಅಂಕಲ್; ಮುಂದೆನಾಯ್ತು!

ತಮ್ಮ ಡ್ಯಾನ್ಸ್ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿದ್ದ ಡ್ಯಾನ್ಸಿಂಗ್ ಅಂಕಲ್ ಇದೀಗ ತನ್ನ ಆರಾಧ್ಯ ನಟ ಗೋವಿಂದರನ್ನು ಭೇಟಿ ಮಾಡಿದ್ದು ಅಲ್ಲದೆ ಇಬ್ಬರು ವೇದಿಕೆ ಮೇಲೆ ಕುಣಿದು...

ಕೊನೆಗೂ ತನ್ನ ಆರಾಧ್ಯ ನಟ ಗೋವಿಂದರನ್ನು ಭೇಟಿ ಮಾಡಿದ ಡ್ಯಾನ್ಸಿಂಗ್ ಅಂಕಲ್; ಮುಂದೆನಾಯ್ತು!
ಸಂಜೀವ್ ಶ್ರೀವಾತ್ಸವ, ಗೋವಿಂದಾ
Published On :
ತಮ್ಮ ಡ್ಯಾನ್ಸ್ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿದ್ದ ಡ್ಯಾನ್ಸಿಂಗ್ ಅಂಕಲ್ ಇದೀಗ ತನ್ನ ಆರಾಧ್ಯ ನಟ ಗೋವಿಂದರನ್ನು ಭೇಟಿ ಮಾಡಿದ್ದು ಅಲ್ಲದೆ ಇಬ್ಬರು ವೇದಿಕೆ ಮೇಲೆ ಕುಣಿದು ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. 
Story image
ಡ್ಯಾನ್ಸಿಂಗ್ ಅಂಕಲ್ ಎಂದೇ ಖ್ಯಾತರಾಗಿರುವ 40ರ ಹರೆಯದ ಸಂಜೀವ್ ಶ್ರೀವಾತ್ಸವ್ ಅವರು ಭೋಪಾಲ್ ನ ಬಾಬಾ  ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಡಿಪಾರ್ಟ್ಮೆಂಟ್ನಲ್ಲಿ ಪ್ರೋಫೆಸರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು ಬಾಲಿವುಡ್ ನಟಿ ಮಾಧುರಿ ದಿಕ್ಷಿತ್ ನಡೆಸಿಕೊಡುವ ಡ್ಯಾನ್ಸ್ ದಿವಾನೆ ರಿಯಾಲಿಟಿ ಶೋ ಕಾರ್ಯಕ್ರಮದ ವೇದಿಕೆ ಮೇಲೆ ಸಂಜೀವ್ ಶ್ರೀವಾತ್ಸವ್ ಹಾಗೂ ನಟ ಗೋವಿಂದ್ ಒಂದೇ ಹಾಡಿಗೆ ಹೆಜ್ಜೆ ಹಾಕಿದರು.  
Story image
ಸಂಬಂಧಿಕರೊಬ್ಬರ ಮದುವೆಯಲ್ಲಿ ಸಂಜೀವ್ ಶ್ರೀವಾತ್ಸವ್ ಅವರು 1987ರಲ್ಲಿ ಬಾಲಿವುಡ್ ನಟ ಗೋವಿಂದಾ ಅಭಿನಯದ ಖುದ್ಗರ್ಜ್ ಚಿತ್ರದ ಆಪ್ ಕೆ ಆ ಜಾನೆ ಸೆ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಡ್ಯಾನ್ಸಿಂಗ್ ಅಂಕಲ್ ಎಂಬ ಅಡಿಬರಹದೊಂದಿಗೆ ಅಪ್ ಲೋಡ್ ಮಾಡಲಾಗಿತ್ತು. ಈ ವಿಡಿಯೋ ವೈರಲ್ ಆಗಿತ್ತು. 
Story image
ಮೇ 30ರಂದು ಟ್ವೀಟ್ ಮಾಡಲಾದ ವಿಡಿಯೋವನ್ನು ಸಾವಿರಾರೂ ಮಂದಿ ರೀ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.