ಬಾಲಿವುಡ್

ಹಲ್ಲೆ ಪ್ರಕರಣ: ನಟ ಅರ್ಮಾನ್ ಕೊಹ್ಲಿ ಬಂಧನ

ಹಲ್ಲೆ ಪ್ರಕರಣದಲ್ಲಿ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಬಂಧನಕ್ಕೊಳಗಾಗಿದ್ದಾರೆ.

ಹಲ್ಲೆ ಪ್ರಕರಣ: ನಟ ಅರ್ಮಾನ್ ಕೊಹ್ಲಿ ಬಂಧನ
ಅರ್ಮಾನ್ ಕೊಹ್ಲಿ
Published On :
ಮುಂಬೈ: ಹಲ್ಲೆ ಪ್ರಕರಣದಲ್ಲಿ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಬಂಧನಕ್ಕೊಳಗಾಗಿದ್ದಾರೆ. ರೂಪದರ್ಶಿ ಹಾಗೂ ಕೊಹ್ಲಿಯ ಗೆಳತಿಯೂ ಆಗಿರುವ ನೀರೂ ರಾಧಾವಾನ್ ಅವರು ನೀಡಿರುವ ದೂರಿನ ಆಧಾರದ ಮೇಲೆ ಅರ್ಮಾನ್ ಕೊಹ್ಲಿಯನ್ನು ಬಂಧಿಸಲಾಗಿದೆ.  ಮುಂಬೈನ ಸ್ಯಾಂಟಕ್ರೂಜ್ ಜಾಲೀಸ್ ಠಾಣೆಯಲ್ಲಿ ಅರ್ಮಾನ್ ಕೊಹ್ಲಿ ವಿರುದ್ಧ ಪ್ರಕರಣ ದಾಖಲಾಗಿತ್ತು. 
ಹಲ್ಲೆ ನಂತರ ಆಸ್ಪತ್ರೆಗೆ ದಾಖಲಾಗಿದ್ದ ನೀರೂ ರಾಧಾವಾನ್ ಕೊಹ್ಲಿ ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾನೆ ಎಂದು ದೂರು ನೀಡಿದ್ದರು. ಅರ್ಮಾನ್ ಕೊಹ್ಲಿ ಅವರು ಖ್ಯಾತ ನಿರ್ಮಾಪಕ ರಾಜ್‍ಕುಮಾರ್ ಕೊಹ್ಲಿಯ ಪುತ್ರನಾಗಿದ್ದು, ವಿರೋಧಿ ಚಿತ್ರದ ಮೂಲಕ ಬಣ್ಣ ಹಚ್ಚಿದ ಕೊಹ್ಲಿ ನಂತರ ಜಾನಿ ದುಶ್ಮನ್, ಎಲ್‍ಒಸಿ ಕಾರ್ಗಿಲ್ ಚಿತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.