ಭಾರತೀಯ ಮಹಿಳೆಯರು ಸೀರೆ ಉಡುವುದನ್ನು ಕಲಿತಿರಬೇಕು: ಬಾಲಿವುಡ್ ನಟಿ ಕಂಗನಾ ರನೌತ್
ಸೀರೆ ನಮ್ಮ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ.. ಭಾರತೀಯ ನಾರಿಯರು ಸೀರೆ ಉಡುವುದನ್ನು ಕಲಿತಿರಬೇಕು ಎಂದು ಬಾಲಿವುಡ್ ನಟಿ ಕಂಗಾನಾ ರನೌತ್ ಹೇಳಿದ್ದಾರೆ.

Published On :
ಮುಂಬೈ: ಸೀರೆ ನಮ್ಮ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ.. ಭಾರತೀಯ ನಾರಿಯರು ಸೀರೆ ಉಡುವುದನ್ನು ಕಲಿತಿರಬೇಕು ಎಂದು ಬಾಲಿವುಡ್ ನಟಿ ಕಂಗಾನಾ ರನೌತ್ ಹೇಳಿದ್ದಾರೆ.
ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಮ್ಯಾಗಜಿನ್ ವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಕಂಗಾನಾ, ' ನನ್ನ ಪ್ರಕಾರ ನೀವು ಭಾರತೀಯ ಮಹಿಳೆಯಾಗಿದ್ದರೆ ಖಂಡಿತಾ ಸೀರೆ ಉಡುವುದನ್ನು ಕಲಿತಿರಬೇಕು. ನಮ್ಮ ಸಂಸ್ಕೃತಿಯೇ ನಮ್ಮ ಗುರುತು.. ಸಂಸ್ಕೃತಿಯನ್ನೇ ಗೌರವಿಸದವರಿಗೆ ನಾಚಿಕೆಯಾಗಬೇಕು. ಅಂತೆಯೇ ಬಲವಂತದ ಹೇರಿಕೆ ಕೂಡ ತಪ್ಪು. ನಮ್ಮ ಸಂಸ್ಕೃತಿ ಹಾಗೂ ನಮ್ಮ ಗುರುತನ್ನು ಪ್ರಶ್ನಿಸುವವರಿಗೆ ನಾಚಿಗೆಯಾಗಬೇಕು ಎಂದು ಕಂಗನಾ ಹೇಳಿದ್ದಾರೆ.
ಅಂತೆಯೇ 'ನನ್ನ ಹೇಳಿಕೆ ಕೆಲವರಿಗೆ ಇಷ್ಟುವಾಗುವುದಿಲ್ಲ ಎಂದು ನನಗೆ ಗೊತ್ತಿದೆ. ಕೆಲವರು ಹಿಂದಿ ಮಾತನಾಡುತ್ತಾರೆ ಅಥವಾ ಅವರು ಭಾರತೀಯ ಆಹಾರವನ್ನು ಇಷ್ಟಪಡುತ್ತಾರೆ ಎಂದು ಮಾತನಾಡುತ್ತಾರೆ. ಆದರೆ ನಿಮ್ಮ ವ್ಯಕ್ತಿತ್ವ ಮತ್ತು ವೈಯುಕ್ತಿಕತೆಯೊಂದಿಗೆ ರಾಜಿ ಮಾಡಿಕೊಳ್ಳದೆ ನೀವು ಜಗತ್ತಿನ ನಾಗರಿಕರಾಗಬಹುದು ಎಂದು ಕಂಗನಾ ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಇದೇ ಕಂಗನಾ ಕ್ಯಾನೆ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಪ್ರಥಮ ಬಾರಿಗೆ ಖ್ಯಾತ ವಸ್ತ್ರ ವಿನ್ಯಾಸಕಿ ಸಬ್ಯಸಾಚಿ ಮುಖರ್ಜಿ ಅವರ ಕೈಯಲ್ಲಿ ಮೂಡಿದ ಚಿತ್ತಾಕರ್ಷಕ ಸೀರೆಯನ್ನು ಉಟ್ಟು ಗಮನ ಸೆಳೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiಮುಂಬೈBollywoodಬಾಲಿವುಡ್Indian Cultureಭಾರತೀಯ ಸಂಸ್ಕೃತಿಕಂಗನಾ ರನೌತ್Kangana RanautIndian Sareeಭಾರತೀಯ ಸೀರೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


