ಬಾಲಿವುಡ್

2019ರಲ್ಲೂ ಮೋದಿ ಗೆಲ್ಲಬೇಕು, ದೇಶ ಅಭಿವೃದ್ಧಿ ಮಾಡಲು 5 ವರ್ಷ ಸಾಕಾಗಲ್ಲ: ಕಂಗನಾ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ ಬಾಲಿವುಡ್ ನಟಿ ಕಂಗನಾ ರನೌತ್ ಅವರು, 2019ರಲ್ಲಿ ಮೋದಿ...

2019ರಲ್ಲೂ ಮೋದಿ ಗೆಲ್ಲಬೇಕು, ದೇಶ ಅಭಿವೃದ್ಧಿ ಮಾಡಲು 5 ವರ್ಷ ಸಾಕಾಗಲ್ಲ: ಕಂಗನಾ
ಕಂಗನಾ ರನೌತ್
Published On :
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ ಬಾಲಿವುಡ್ ನಟಿ ಕಂಗನಾ ರನೌತ್ ಅವರು, 2019ರಲ್ಲಿ ಮೋದಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರಬೇಕು. ದೇಶದ ಅಭಿವೃದ್ಧಿ ಮಾಡಲು ಐದು ವರ್ಷ ಸಾಕಾಗುವುದಿಲ್ಲ ಎಂದು ಬಾಲಿವುಡ್ ನಟಿ ಹೇಳಿದ್ದಾರೆ. ಈ ಮೂಲಕ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪ್ರವೇಶಿಸುವ ಸುಳಿವು ನೀಡಿದ್ದಾರೆ.
ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿ ಅವರು ಅತ್ಯಂತ ಅರ್ಹ ಅಭ್ಯರ್ಥಿ ಮತ್ತು ಪ್ರಜಾಪ್ರಭುತ್ವದ ನಿಜವಾದ ನಾಯಕ. ಅವರು ಹೆತ್ತವರ ಕಾರಣದಿಂದಾಗಿ ಈ ಸ್ಥಾನಕ್ಕೆ ಬಂದಿಲ್ಲ. ಈ ಸ್ಥಾನಕ್ಕೆ ಬರಲು ಅವರು ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಎಂದು ಕಂಗನಾ ಹೇಳಿದ್ದಾರೆ.
ಇತ್ತೀಚಿಗಷ್ಟೇ ತಾನು ಪ್ರಧಾನಿ ಮೋದಿ ಅವರ ಬಹು ದೊಡ್ಡ ಅಭಿಮಾನಿ ಎಂದಿದ್ದ ಕಂಗನಾ, ಅವರ ಯಶಸ್ವಿ ಜೀವನ ನಮಗೆ ರೋಲ್ ಮಾಡೆಲ್. ಒಬ್ಬ ಚಾಯ್ ವಾಲ ಪ್ರಧಾನಿ ಆಗುವುದು, ಸಾಮಾನ್ಯ ಮನುಷ್ಯನ ಸಾಧನೆ ಮಾತ್ರವಲ್ಲ. ಅದು ನಮ್ಮ ಪ್ರಜಾಪ್ರಭುತ್ವದ ಯಶಸ್ಸು ಕೂಡ ಎಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.