ನನ್ನ 'ದೇಹದ ಮಾದರಿ'ಯನ್ನು ಟೀಕಿಸಲಾಗಿತ್ತು: ಇಲಿಯಾನ
ನನ್ನ 'ದೇಹದ ಮಾದರಿ'ಯನ್ನು ಟೀಕಿಸಲಾಗಿತ್ತು ಎಂದಿರುವ ದಕ್ಷಿಣ ಭಾರತದ ಖ್ಯಾತ ನಟಿ ಇಲಿಯಾನ ಡಿ'ಕ್ರೂಸ್, ತನ್ನನ್ನು ತಾನು...

Published On :
ಮುಂಬೈ: ನನ್ನ 'ದೇಹದ ಮಾದರಿ'ಯನ್ನು ಟೀಕಿಸಲಾಗಿತ್ತು ಎಂದಿರುವ ದಕ್ಷಿಣ ಭಾರತದ ಖ್ಯಾತ ನಟಿ ಇಲಿಯಾನ ಡಿ'ಕ್ರೂಸ್, ತನ್ನನ್ನು ತಾನು ಪ್ರೀತಿಸುವುದನ್ನು ಕಲಿಯಲು ಯತ್ನಿಸುತ್ತಿರುವುದಾಗಿ ಹೇಳಿದ್ದಾರೆ.
ಕಳೆದ ಬುಧವಾರ ಇನ್ ಸ್ಟಾಗ್ರಾಮ್ ಮೂಲಕ ಅಭಿಮಾನಿಗಳೊಂದಿಗೆ ಸಂವಾದ ನಡೆಸಿರುವ ಇಲಿಯಾನ, ಮೊದಲನೆಯದಾಗಿ ನಾನು ಅವಲಕ್ಷಣವಾದ ದೇಹವನ್ನು ಹೊಂದಿಲ್ಲ. ಎರಡನೆಯದಾಗಿ ನನ್ನ ದೇಹದ ಮಾದರಿಗಾಗಿ ನಾನು ಟೀಕೆಗೆ ಒಳಗಾಗಿದ್ದೇನೆ. ಆದರೂ ನನ್ನನ್ನು ನಾನು ಪ್ರೀತಿಸುವುದನ್ನು ಕಲಿಯಲು ಯತ್ನಿಸುತ್ತಿದ್ದೇನೆ ಎಂದಿದ್ದಾರೆ.
"ರೈಡ್" ನಟಿ ತಾನು ಖಿನ್ನತೆಯನ್ನು ಎದುರಿಸುವ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು, ಖಿನ್ನತೆಯಿಂದ ಹೊರಬರಲು ಸಲಹೆ ನೀಡಿ ಎಂಬ ಅಭಿಮಾನಿಯ ಮನವಿಗೆ ಸ್ಪಂದಿಸಿದ ಇಲಿಯಾನ, ಮನೋವೈದ್ಯರನ್ನು ಭೇಟಿ ಮಾಡಿ. ಅವರು ನಿಮ್ಮ ಆತಂಕವನ್ನು ನಿಭಾಯಿಸಲು ಸಲಹೆ ನೀಡಬಹುದು. ನಾನು ಕೆಲವೊಮ್ಮೆ ಆತಂಕಕ್ಕೆ ಒಳಗಾಗಿದ್ದೇನೆ. ನನ್ನ ಮನೋವೈದ್ಯರು ನನಗೆ ಸರಳ ವ್ಯಾಯಾಮವನ್ನು ನೀಡಿದರು. ಇದು ಅಗಾಧವಾಗಿ ನೆರವಾಯಿತು ಎಂದಿದ್ದಾರೆ.
ಇತ್ತೀಚೆಗಷ್ಟೆ ಟ್ರೋಲ್ ಗೆ ಒಳಗಾಗಿದ್ದ ಇಲಿಯಾನ, ಟ್ರೋಲ್ ಮಾಡುವವರು ಮತ್ತು ಟೀಕಿಸುವವರಿಗೆ ಕೇರ್ ಮಾಡಬೇಡಿ. ಅವರ ಅಭಿಪ್ರಾಯಗಳನ್ನು ಮೂಲೆಗೆ ಎಸೆಯಿರಿ. ತಾರೆಯರ ಬಗ್ಗೆ ಅವರೇನು ಅಂದುಕೊಂಡಿದ್ದಾರೆ ? ಅವರಿಂದ ನಾವು ತಾರೆಯರಾಗಿಲ್ಲ. ನಾವು ಕಷ್ಟಪಟ್ಟು ತಾರಾ ಪಟ್ಟಕ್ಕೇರಿದ್ದೇವೆ. ನಿಮ್ಮ ಕರಾಳತನದಲ್ಲಿ ನಾವು ತಾರೆಯರಂತೆ ಹೊಳೆಯುತ್ತಿದ್ದೇವೆ ಎಂದು ಖಾರವಾಗಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


