ಪ್ರಿಯಾಂಕಾ ಚೋಪ್ರಾ-ನಿಖ್ ಜೊನಸ್ ಸೈಕ್ಲಿಂಗ್; ವೈರಲ್ ಆಯ್ತು ಫೋಟೋ
ಜುಲೈ 4ರಂದು(ಅಮೆರಿಕಾ ಸ್ವತಂತ್ರ ಹೊಂದಿದ ದಿವಸ) ಅಂದರೆ ಮೊನ್ನೆ ಮಂಗಳವಾರ ತನ್ನ ಗೆಳೆಯ ...

ವಾಷಿಂಗ್ಟನ್: ಜುಲೈ 4ರಂದು(ಅಮೆರಿಕಾ ಸ್ವತಂತ್ರ ಹೊಂದಿದ ದಿವಸ) ಅಂದರೆ ಮೊನ್ನೆ ಮಂಗಳವಾರ ತನ್ನ ಗೆಳೆಯ ಅಮೆರಿಕಾದ ಪ್ರಸಿದ್ಧ ಹಾಡುಗಾರ ಮತ್ತು ಸಂಗೀತ ಸಂಯೋಜಕ ನಿಕ್ ಜೊನಸ್ ಜೊತೆ ಅಮೆರಿಕಾದ ಬೀದಿಗಳಲ್ಲಿ ಕೈ ಕೈ ಹಿಡಿದು ಓಡಾಡಿದ್ದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಭಾರತಕ್ಕೆ ಬಂದಿದ್ದ ಈ ತಾರಾ ಜೋಡಿ ಮುಂಬೈ, ಗೋವಾ ಎಂದು ಸುತ್ತಾಡಿ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದರು. ಮುಖೇಶ್ ಅಂಬಾನಿ ಮಗನ ನಿಶ್ಚಿತಾರ್ಥಕ್ಕೆ ಕೂಡ ಜೊತೆಯಾಗಿ ಆಗಮಿಸಿ ಕ್ಯಾಮರಾಗೆ ಖುಷಿಯಿಂದಲೇ ಫೋಸ್ ಕೊಟ್ಟಿದ್ದರು. ಈ ಮಧ್ಯೆ ಬ್ರೆಝಿಲ್ ಗೂ ಹೋಗಿಬಂದರು. ಇದೀಗ ಮತ್ತೆ ತಮ್ಮ ನ್ಯೂಯಾರ್ಕ್ ಗೆ ತೆರಳಿರುವ ಜೋಡಿ ಅಲ್ಲಿ ಮತ್ತೆ ಒಟ್ಟೊಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ನಿಖ್ ಕುಟುಂಬದವರ ಜೊತೆ ಸಮಯ ಕಳೆಯುತ್ತಿದ್ದಾರೆ.
ಇ! ಆನ್ ಲೈನ್ ವರದಿ ಮಾಡಿರುವ ಪ್ರಕಾರ, ನಿಖ್ ಜೊನಸ್ ಸೋದರ ಜೊ ಜೊನಸ್ ಮತ್ತು ಆತನ ಭಾವಿ ಪತ್ನಿ ಸೋಫಿ ಟರ್ನರ್ ಜೊತೆಗೆ ಪ್ರಿಯಾಂಕಾ ಮತ್ತು ನಿಖ್ ಮೊನ್ನೆ ಸೈಕ್ಲಿಂಗ್ ಹೋಗಿದ್ದರು. ಬಿಳಿ ಟೀಶರ್ಟ್ ನಲ್ಲಿ ಇಬ್ಬರೂ ಮಿಂಚುತ್ತಿದ್ದರು.ಕಳೆದ ವರ್ಷದ ಮೆಟ್ ಗಾಲಾ ರೆಡ್ ಕಾರ್ಪೆಟ್ ನಲ್ಲಿ ಇವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡ ನಂತರ ಇವರ ಸಂಬಂಧದ ಬಗ್ಗೆ ಅಲ್ಲಲ್ಲಿ ಗುಸುಗುಸು ಕೇಳಿಬರುತ್ತಿದ್ದು ಅದೀಗ ಬಲವಾಗಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


