ಬಾಲಿವುಡ್

ಗಾಂಧೀಜಿಯ ಪುಣ್ಯ ದಿನದಂದು 'ಹೇ ರಾಮ್' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ

'ಹೇ ರಾಮ್ ಹಮೆ ಗಾಂಧಿ ಕೊ ಮಾರ್ ದಿಯಾ' ಚಿತ್ರತಂಡವು ಮಹಾತ್ಮಾ ಗಾಂಧಿ 70ನೇ ಪುಣ್ಯ ಸ್ಮರಣೆ ದಿನವಾದ ಮಂಗಳವಾರ (ಜ.30) ಚಿತ್ರದ ಎರಡನೇ ಪೋಸ್ಟರ್ ಬಿಡುಗಡೆಗೊಳಿಸಿದೆ.

ಗಾಂಧೀಜಿಯ ಪುಣ್ಯ ದಿನದಂದು 'ಹೇ ರಾಮ್' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ
'ಹೇ ರಾಮ್' ಚಿತ್ರದ ಹೊಸ ಪೋಸ್ಟರ್
Published On :
ಮುಂಬೈ: 'ಹೇ ರಾಮ್ ಹಮೆ ಗಾಂಧಿ ಕೊ ಮಾರ್ ದಿಯಾ' ಚಿತ್ರತಂಡವು ಮಹಾತ್ಮಾ ಗಾಂಧಿ 70ನೇ ಪುಣ್ಯ ಸ್ಮರಣೆ ದಿನವಾದ  ಮಂಗಳವಾರ (ಜ.30) ಚಿತ್ರದ ಎರಡನೇ ಪೋಸ್ಟರ್ ಬಿಡುಗಡೆಗೊಳಿಸಿದೆ.
ನಯೀಮ್ ಎ. ಸಿದ್ದಿಕಿ ನಿರ್ದೇಶನದ ಈ ಚಿತ್ರದಲ್ಲಿ ಮಹಾತ್ಮದ ಹತ್ಯೆಯ ಎರಡು ದಿನಗಳ ಮೊದಲು ಜನವರಿ 28, 1948 ರಂದು ರೈಲು ಪ್ರಯಾಣದಲ್ಲಿ ಭೇಟಿಯಾದ ಇಬ್ಬರು ಅಪರಿಚಿತರ ಎರಡು ಸಂಪೂರ್ಣ ವಿರುದ್ಧವಾದ ಸಿದ್ದಾಂತಗಳ ಸುತ್ತ ಕಥೆ ಹೆಣೆಯಲಾಗಿದೆ.
ಎರಡು ದಿನಗಳ ಪ್ರಯಾಣದಲ್ಲಿ ನಡೆಯುವ ಘಟನೆಗಳು ಈ ಇಬ್ಬರು ವ್ಯಕ್ತಿಗಳ ಮೇಲೆ ಬೀರುವ ಪರಿಣಾಮ ಮತ್ತು ಪ್ರತಿಕ್ರಿಯೆಗಳನ್ನು ಒಳಗೊಂಡಿದೆ. ಇದರಲ್ಲಿ ಯಾರದು ಸರಿ, ಯಾರು ತಪ್ಪೆಂದು ಯೋಚಿಸಲು ಅವಕಾಶ ಮಾಡಿಕೊಡಲಿದೆ. "ಪ್ರಪಂಚದಾದ್ಯಂತ ಅಹಿಂಸೆಯ ಸಂದೇಶವನ್ನು ಹರಡುವುದು ಈ ಚಲನಚಿತ್ರದ ಉದ್ದೇಶವಾಗಿದೆ. ಇಂದಿನ ಜಗತ್ತು 1948 ರ ಜನವರಿ 30 ರಂದು ನಡೆದ ದ್ವೇಷ ಮತ್ತು ಹಿಂಸಾಚಾರದ ಪರಿಸ್ಥಿತಿಗಳ ನಿಖರವಾದ ಪ್ರತಿಸೃಷ್ಟಿಯಾಗಿದೆ ಮತ್ತು ಅದುವೇ ಮಹಾತ್ಮಾ ಗಾಂಧಿಯ ಹತ್ಯೆಗೆ ಕಾರಣವಾಯಿತು. ಆ ದಿನಗಳಲ್ಲಿ ಜಗತ್ತು ಇದ್ದ ಸ್ಥಿತಿಯೂ ಇಂದಿನ ಪರಿಸ್ಥಿತಿಯೂ ಒಂದೇ ಆಗಿದೆ. ಧರ್ಮ, ಜಾತಿ ಮತ್ತು ಜನಾಂಗೀಯತೆಯ ಹೆಸರಿನಲ್ಲಿ ಭಯ ಮತ್ತು ಹಿಂಸಾಚಾರ ಎಲ್ಲೆಲ್ಲಿಯೂ ಕಾಣುತ್ತಿದೆ.
"ಈ ಚಿತ್ರದ ಮೂಲಕ ನಾನು ಗಾಂಧೀಜಿಯ ಆದರ್ಶದ ಪ್ರಾಮುಖ್ಯತೆಯ ಸಂದೇಶವನ್ನು, ವಿಶ್ವದಲ್ಲಿ ಶಾಂತಿ, ಪ್ರೀತಿ ಮತ್ತು ಸಹಿಷ್ಣುತೆಯನ್ನು ಹರಡಲು ಪ್ರಯತ್ನಿಸಿದ್ದೇನೆ. ಮಹಾತ್ಮ ಗಾಂಧಿ ಅವರ 150 ನೇ ಜನ್ಮದಿನದಂದು, ದ್ವೇಷ ಮತ್ತು ಹಿಂಸೆಯ ವಿರುದ್ಧ ಹೋರಾಡುವ ಏಕೈಕ ತತ್ತ್ವವೆಂದರೆ ಅದು ಗಾಂಧಿಯವರ ತತ್ವ, ಇದನ್ನು ಕೊನೆಯಾಗಲು ಬಿಡುವುದಿಲ್ಲ ಎಂದು ಪ್ರತಿಯೊಬ್ಬರೂ ಪ್ರತಿಜ್ಞೆ ತೆಗೆದುಕೊಳ್ಳಬೇಕು ಎಂಬುದು ನನ್ನ ಅಭಿಮತ" ನಿರ್ದೇಶಕ ಸಿದ್ದಿಕಿ ಹೇಳಿದ್ದಾರೆ.
"ನಾನು ಗಾಂಧೀಜಿಯ ಹುಟ್ಟುಹಬ್ಬ ಅಕ್ಟೋಬರ್ 2 ರಂದು ಲಖನೌದಲ್ಲಿ ನನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಅಹಿಂಸೆಯ ದಿನ ಎಂದು ಆಚರಿಸಿದ್ದೆನು. ಅದೇ ರಾತ್ರಿ ನಾನು ವಿಶ್ವಸಂಸ್ಥೆ ಕೂಡ ಗಾಂಧೀಜಿಯ ಹುಟ್ಟುಹಬ್ಬವನ್ನು ವಿಶ್ವ ಅಹಿಂಸಾ ದಿನವೆಂದು ಆಚರಿಸುತ್ತದೆ ಎಂದು ದೂರದರ್ಶನದಲ್ಲಿ ನೋಡಿದೆ. ಗಾಂಧಿಯವರ 150 ನೇ ಜನ್ಮ ದಿನಾಚರಣೆ ನಡೆಯುವ 2 ಅಕ್ಟೋಬರ್ 2018 ರಂದು ನಾವು ಸಮಾಜಕ್ಕೆ ದೊಡ್ಡ, ಅರ್ಥಪೂರ್ಣವಾದದ್ದನ್ನು  ಏನಾದರೂ ಮಾಡಬೇಕೆಂದು ನಾನು ನಿರ್ಧರಿಸಿದೆ " ಚಿತ್ರ ನಿರ್ದೇಶನಕ್ಕೆ ಸ್ಪೂರ್ತಿ ಹೇಗೆ ಸಿಕ್ಕಿತು ಎನ್ನುವ ಬಗೆಗೆ ನಿರ್ದೇಶಕರು ವಿವರಿಸಿದರು.
ಚಿತ್ರದಲ್ಲಿ ಜತಿನ್ ಗೋಸ್ವಾಮಿ, ಸಮೀಕ್ಷಾ ಭಟ್ನಾಗರ್, ಸುಬ್ರತ್ ದತ್ತಾ ಮತ್ತು ಪ್ರತಿಮಾ ಕಾಜ್ಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.