ಬಾಲಿವುಡ್

ಪದ್ಮಾವತ್'ಗಾಗಿ ಪ್ಯಾಡ್‌ಮ್ಯಾನ್ ಬಿಡುಗಡೆ ಮುಂದೂಡಿದ ಅಕ್ಷಯ್‌ಗೆ ಬನ್ಸಾಲಿ ಧನ್ಯವಾದ!

ವಿವಾದಿತ ಪದ್ಮಾವತ್ ಚಿತ್ರ ಇದೇ ತಿಂಗಳ 25ರಂದು ಬಿಡುಗಡೆಯಾಗುತ್ತಿದ್ದು ಪದ್ಮಾವತ್ ಗಾಗಿ ಅಕ್ಷಯ್ ಕುಮಾರ್ ತಮ್ಮ ಪ್ಯಾಡ್ ಮ್ಯಾನ್ ಚಿತ್ರದ ಬಿಡುಗಡೆಯನ್ನು...

ಪದ್ಮಾವತ್'ಗಾಗಿ ಪ್ಯಾಡ್‌ಮ್ಯಾನ್ ಬಿಡುಗಡೆ ಮುಂದೂಡಿದ ಅಕ್ಷಯ್‌ಗೆ ಬನ್ಸಾಲಿ ಧನ್ಯವಾದ!
ಪ್ಯಾಡ್ ಮ್ಯಾನ್, ಪದ್ಮಾವತ್ ಚಿತ್ರದ ಸ್ಟಿಲ್ಸ್
Published On :
ಮುಂಬೈ: ವಿವಾದಿತ ಪದ್ಮಾವತ್ ಚಿತ್ರ ಇದೇ ತಿಂಗಳ 25ರಂದು ಬಿಡುಗಡೆಯಾಗುತ್ತಿದ್ದು ಪದ್ಮಾವತ್ ಗಾಗಿ ಅಕ್ಷಯ್ ಕುಮಾರ್ ತಮ್ಮ ಪ್ಯಾಡ್ ಮ್ಯಾನ್ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದು ಇದಕ್ಕೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಅಕ್ಷಯ್ ಕುಮಾರ್ ಗೆ ಧನ್ಯವಾದ ತಿಳಿಸಿದ್ದಾರೆ. 
ಬಹುಕೋಟಿ ವೆಚ್ಚದ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಬಾಕ್ಸ್ ಆಫೀಸ್ ನಲ್ಲಿ ಘರ್ಷಣೆ ಉದ್ಭವವಾಗುತ್ತದೆ. ಈ ಹಿನ್ನೆಲೆಯಲ್ಲಿ ಬನ್ಸಾಲಿ ಅವರು ಪ್ಯಾಡ್ ಮ್ಯಾನ್ ಚಿತ್ರದ ಬಿಡುಗಡೆಯನ್ನು ಮುಂದೂಡುವಂತೆ ಅಕ್ಷಯ್ ಕುಮಾರ್ ಗೆ ಮನವಿ ಮಾಡಿದ್ದರು. ಅಂತೆ ಅಕ್ಷಯ್ ತಮ್ಮ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದರು. 
ಈ ಮುಂಚೆ ಆರ್ ಬಾಲ್ಕಿ ನಿರ್ದೇಶನದ ಪ್ಯಾಡ್ ಮ್ಯಾನ್ ಚಿತ್ರದ ಬಿಡುಗಡೆ ದಿನಾಂಕವನ್ನು ಜನವರಿ 25ಕ್ಕೆ ನಿಗದಿ ಮಾಡಲಾಗಿತ್ತು. ಈಗ ಅದನ್ನು ಫೆಬ್ರವರಿ 9ಕ್ಕೆ ಮುಂದೂಡಲಾಗಿದೆ.
ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಅಕ್ಷಯ್ ಕುಮಾರ್ ಅವರು ನಾವು ಎಲ್ಲಾ ಒಂದೇ ಕುಟುಂಬವಿದ್ದಂತೆ. ಅವರ ಚಿತ್ರ ಮಾತ್ರ ಜನವರಿ 25ರಂದು ಬಿಡುಗಡೆಯಾಗಲಿ ಮತ್ತು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.