ಬಾಲಿವುಡ್

ಶ್ರೀದೇವಿ ಪಾರ್ಥಿವ ಶರೀರ ಮುಂಬೈಗೆ ಆಗಮನ, ಬುಧವಾರ ಬೆಳಿಗ್ಗೆ ಸಾರ್ವಜನಿಕ ದರ್ಶನ

ಶನಿವಾರದಂದು ದುಬೈನಲ್ಲಿ ಮೃತಪಟ್ಟ ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಪಾರ್ಥಿವ ಶರೀರವಿದ್ದ ವಿಮಾನ ಮುಂಬೈಗೆ ಆಗಮಿಸಿದೆ.

ಶ್ರೀದೇವಿ ಪಾರ್ಥಿವ ಶರೀರ ಮುಂಬೈಗೆ ಆಗಮನ, ಬುಧವಾರ ಬೆಳಿಗ್ಗೆ ಸಾರ್ವಜನಿಕ ದರ್ಶನ
ಶ್ರೀದೇವಿ ಪಾರ್ಥಿವ ಶರೀರ ಮುಂಬೈಗೆ ಆಗಮನ,
Published On :
ಮುಂಬೈ: ಶನಿವಾರದಂದು ದುಬೈನಲ್ಲಿ ಮೃತಪಟ್ಟ ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಪಾರ್ಥಿವ ಶರೀರವಿದ್ದ ವಿಮಾನ ಮುಂಬೈಗೆ ಆಗಮಿಸಿದೆ.
Story image
ಶ್ರೀದೇವಿ ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಇದಾಗಲೇ ವಿಮಾನ ನಿಲ್ದಾಣದಲ್ಲಿ ನೆರೆದಿದ್ದು ನಿಲ್ದಾಣ ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಶ್ರೀದೇವಿ ಮೃತದೇಹವನ್ನು ಪಡೆದುಕೊಳ್ಳಲು ಅನಿಲ್ ಕಪೂರ್ ಹಾಗೂ ಸೋನಂ ಕಪೂರ್ ಆಗಮಿಸಿದ್ದು ವಿಮಾನ ನಿಲ್ದಾಣದ ಗೇಟ್ ನಂ.8ರ ಮೂಲಕ ದೇಹವನ್ನು ಬೋನಿ ಕಪೂರ್ ಮನೆಗೆ ತೆಗೆದುಕೊಂಡು ಹೋಗಲಾಗುತ್ತದೆ.
ಶ್ರೀದೇವಿ ಶರೀರವನ್ನು ಅನಿಲ್ ಅಂಬಾನಿಯವರ ವಿಶೇಷ ವಿಮಾನದಲ್ಲಿ ದುಬೈನಿಂದ ತರಲಾಗಿದ್ದು  ಅನಿಲ್‌ ಅಂಬಾನಿ, ಟೀನಾ ಅಂಬಾನಿ, ಶ್ರೀದೇವಿ ಕುಟುಂಬ ಸದಸ್ಯರುಗಳು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು.
ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಬುಧವಾರ ಬೆಳಿಗ್ಗೆ ವ್ಯವಸ್ಥೆ ಕಲ್ಪಿಸಲಾಗಿದ್ದು ಸಂಜೆ ಅಂತಿಮ ಸಂಸ್ಕಾರದ ವಿಧಿಗಳು ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.