ಸಾವಿಗೂ ಮುನ್ನಾ ದಿನ ಮದುವೆ ಸಮಾರಂಭದಲ್ಲಿ ಅನಿಲ್ ಕಪೂರ್ ಜತೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದ ಶ್ರೀದೇವಿ!
ಅನಿರೀಕ್ಷಿತವಾಗಿ ಇಹ ಲೋಕವನ್ನು ತೊರೆದ ಭಾರತೀಯ ಚಿತ್ರರಂಗದ ಮೋಹಕ ತಾರೆ ಖ್ಯಾತ ನಟಿ ಶ್ರೀದೇವಿ ಅವರು ಸಾವಿಗೂ ಮುನ್ನ ದಿನ ಬಾಲಿವುಡ್ ನಟ ಅನಿಲ್ ಕಪೂರ್...

Published On :
ಮುಂಬೈ: ಅನಿರೀಕ್ಷಿತವಾಗಿ ಇಹ ಲೋಕವನ್ನು ತೊರೆದ ಭಾರತೀಯ ಚಿತ್ರರಂಗದ ಮೋಹಕ ತಾರೆ ಖ್ಯಾತ ನಟಿ ಶ್ರೀದೇವಿ ಅವರು ಸಾವಿಗೂ ಮುನ್ನ ದಿನ ಬಾಲಿವುಡ್ ನಟ ಅನಿಲ್ ಕಪೂರ್ ಜತೆ ಸಮಾರಂಭದಲ್ಲಿ ನೃತ್ಯ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಂಬಂಧಿಕರ ಮದುವೆಗೆಂದು ಶ್ರೀದೇವಿ ಅವರು ಕುಟುಂಬ ಸಮೇತರಾಗಿ ದುಬೈಗೆ ತೆರಳಿದ್ದರು. ದುರಾದೃಷ್ಠವಶಾತ್ ತಾವು ತಂಗಿದ್ದ ಕೋಣೆಯ ಬಾತ್ ಟಬ್ ನಲ್ಲಿ ಮುಳುಗಿ ಅಸುನೀಗಿದ್ದರು. ಶ್ರೀದೇವಿ ಅವರ ಅನಿರೀಕ್ಷಿತ ಸಾವು ಭಾರತೀಯ ಚಿತ್ರರಂಗಕ್ಕೆ ದೊಡ್ಡ ನೋವಿನ ವಿಷಯವಾಗಿದೆ.
ಈ ಮಧ್ಯೆ ಅವರು ಮದುವೆ ಸಮಾರಂಭದಲ್ಲಿ ಶ್ರೀದೇವಿ ಬಾಲಿವುಡ್ ನಟ ಅನಿಲ್ ಕಪೂರ್ ಅವರ ಜತೆ ಚಿತಿಯಾನ್ ಕಲೈಯಾನ್ ಹಾಡಿಗೆ ಖುಷಿಯಿಂದ ನೃತ್ಯ ಮಾಡಿರುವ ವಿಡಿಯೋವನ್ನು ಅಭಿಮಾನಿಯೊಬ್ಬರು ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದುಬೈನ ಎಮಿರೇಟ್ಸ್ ಟವರ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಶ್ರೀದೇವಿ ಅವರು ಬಾತ್‌ರೂಮ್‌ಗೆ ತೆರಳಿದಾಗ ಹೃದಯ ಸ್ತಂಭನವಾಗಿದ್ದು, ಬಾತ್‌ಟಬ್‌ಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಫೋರೆನ್ಸಿಕ್ ವರದಿಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


