ಬಾಲಿವುಡ್

ತಂದೆ, ಮಗಳ 'ಏಕ್ ಲಡ್ಕಿ ಕೋ ದೇಖಾ ತೊ ಐಸಾ ಲಗಾ' ಚಿತ್ರದ ಫಸ್ಟ್ ಲುಕ್

ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಹಾಗೂ ಅವರ ಪುತ್ರಿ ಸೋನಮ್ ಕಂಪೂರ್ ಜೂಹಿ ಚಾವ್ಬಾ ಅಭಿನಯದ 'ಏಕ್ ಲಡ್ಕಿ ಕೋ.....

ತಂದೆ, ಮಗಳ 'ಏಕ್ ಲಡ್ಕಿ ಕೋ ದೇಖಾ ತೊ ಐಸಾ ಲಗಾ' ಚಿತ್ರದ ಫಸ್ಟ್ ಲುಕ್
ಅನಿಲ್ ಕಪೂರ್, ಸೋನಮ್ ಕಪೂರ್
Published On :
ಮುಂಬೈ: ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಹಾಗೂ ಅವರ ಪುತ್ರಿ ಸೋನಮ್ ಕಂಪೂರ್ ಜೂಹಿ ಚಾವ್ಬಾ ಅಭಿನಯದ 'ಏಕ್ ಲಡ್ಕಿ ಕೋ ದೇಖಾ ತೊ ಐಸಾ ಲಗಾ' ಚಿತ್ರದ ಫಸ್ಟ್ ಲುಕ್ ಸೋಮವಾರ ಬಿಡುಗಡೆಯಾಗಿದೆ.
ಅನಿಲ್ ಕಪೂರ್ ಅವರ 62ನೇ ಹುಟ್ಟು ಹಬ್ಬದ ದಿನವೇ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ನಿರ್ಮಾಪಕರು, ಹಿರಿಯ ನಟನ ಸಂಭ್ರಮ ಹೆಚ್ಚಿಸಿದ್ದಾರೆ.
ಈ ಚಿತ್ರದಲ್ಲಿ ಬರೋಬ್ಬರಿ 11 ವರ್ಷಗಳ ನಂತರ ಅನಿಲ್ ಕಪೂರ್ ಮತ್ತು ಜೂಹಿ ಚಾವ್ಲಾ ಅವರನ್ನು ಒಟ್ಟಿಗೆ ತೆರೆಯಮೇಲೆ ತರಲಾಗಿದೆ. ಇವರಿಬ್ಬರೂ ಕೊನೆಯ ಬಾರಿ 'ಸಲಾಮ್-ಏ-ಇಷ್ಕ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
'1942ರಲ್ಲಿ ತೆರೆಕಂಡ ಎ ಲವ್ ಸ್ಟೋರಿ' ಚಿತ್ರದಲ್ಲಿನ 'ಏಕ್ ಲಡಕಿ ಕೋ ದೇಖಾ ತೊ ಐಸಾ ಲಗಾ ಹಾಡು ಬಹಳ ಜನಪ್ರಿಯತೆಯನ್ನು ಪಡೆದಿತ್ತು. ಅದರಿಂದ ಪ್ರೇರಿತವಾಗಿ ಈಗ ಚಿತ್ರದ ಹೆಸರನ್ನೇ 'ಏಕ್ ಲಡಕಿ ಕೋ ದೇಖಾ ತೊ' ಐಸಾ ಲಗಾ ಎಂದು ಹೆಸರಿಟ್ಟಿದ್ದಾರೆ.
ಈ ಸಿನಿಮಾದಲ್ಲಿ ಅನಿಲ್ ಕಪೂರ್ ಮಗಳಾಗಿ ಸೋನಂ ನಟಿಸುತ್ತಿರುವುದು ಮತ್ತೊಂದು ವಿಶೇಷ. ಇದೇ ಮೊದಲ ಬಾರಿಗೆ ತಂದೆ ಮಗಳು ತೆರೆ ಹಂಚಿಕೊಳ್ಳುತ್ತಿದ್ದಾರೆ.
ಶೆಲ್ಲಿ ಚೋಪ್ರಾ ಧಾರ್ ನಿರ್ದೇಶನದ ಈ ಚಿತ್ರದ ಟ್ರೈಲರ್ ಡಿಸೆಂಬರ್ 27ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.