ಬಾಲಿವುಡ್

ಮದುವೆ ವಿಚಾರದಲ್ಲೂ ಪಡ್ಡೆ ಹುಡುಗರ ನಿದ್ದೆಗೆಡಿಸಿದ ರಾಖಿ ಸಾವಂತ್, ಬೆತ್ತಲೆ ವಿವಾಹ ಆಗ್ತಾರಂತೆ!

ಬಾಲಿವುಡ್ ನ ಸೆಕ್ಸಿ ಕ್ವೀನ್ ರಾಖಿ ಸಾವಂತ್ ಮದುವೆ ಆಗುವ ನಿರ್ಧಾರ ಮಾಡಿರುವುದು ಸರಿ. ಆದರೆ ಈಗ ತಾವು ನಗ್ನ ವಿವಾಹ ಆಗುವುದಾಗಿ ಬರೆದುಕೊಂಡಿದ್ದು ಇದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಮದುವೆ ವಿಚಾರದಲ್ಲೂ ಪಡ್ಡೆ ಹುಡುಗರ ನಿದ್ದೆಗೆಡಿಸಿದ ರಾಖಿ ಸಾವಂತ್, ಬೆತ್ತಲೆ ವಿವಾಹ ಆಗ್ತಾರಂತೆ!
ದೀಪಕ್ ಕಲಾಲ್, ರಾಖಿ ಸಾವಂತ್
Published On :
ಬಾಲಿವುಡ್ ನ ಸೆಕ್ಸಿ ಕ್ವೀನ್ ರಾಖಿ ಸಾವಂತ್ ಮದುವೆ ಆಗುವ ನಿರ್ಧಾರ ಮಾಡಿರುವುದು ಸರಿ. ಆದರೆ ಈಗ ತಾವು ನಗ್ನ ವಿವಾಹ ಆಗುವುದಾಗಿ ಬರೆದುಕೊಂಡಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. 
ಸೆಲೆಬ್ರಿಟಿಗಳು ಮದುವೆ ವಿಚಾರದಲ್ಲಿ ಯಾವುದಕ್ಕೂ ಕಡಿಮೆ ಮಾಡುವುದಿಲ್ಲ. ಅವರ ತೊಡುವ ಉಡುಗೆ ತೊಡುಗೆಗಳು ಕೋಟಿ ಬೆಲೆಯಲ್ಲಿರುತ್ತದೆ. ಆದರೆ ವಿವಾದಿತ ಬೆಡಗಿ ರಾಖಿ ಸಾವಂತ್ ಮಾತ್ರ ಇದಕ್ಕೆ ಅಪವಾದದಂತಿದ್ದಾರೆ. 
ಡಿಸೆಂಬರ್ 31ರಂದು ದೀಪಕ್ ಕಲಾಲ್ ಜತೆ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ರಾಖಿ ಸಾವಂತ್ ಘೋಷಿಸಿದ್ದರು. ಅದಾದ ಮೇಲೆ ಒಂದಲ್ಲ ಒಂದು ವಿಚಾರಗಳನ್ನು ರಾಖಿ ಸಾವಂತ್ ಶೇರ್ ಮಾಡುತ್ತಿದ್ದರು. ಇದೀಗ ಡಿಫರೆಂಟ್ ಆಗಿ ಮದುವೆ ಮಾಡಿಕೊಳ್ಳಲು ಈ ಜೋಡಿ ತೀರ್ಮಾನಿಸಿದೆ. 
ಹೌದು, ರಾಖಿ ಸಾವಂತ್ ಹಾಗೂ ದೀಪಕ್ ಬೆತ್ತಲೆಯಾಗಿ ಮದುವೆಯಾಗುತ್ತಿದ್ದಾರೆ. ಮೊದಲು ಇದನ್ನು ಪ್ರಸ್ತಾಪ ಮಾಡಿದ್ದು ದೀಪಕ್. ಭಾವಿ ಪತಿಯ ಬಯಕೆಗೆ ರಾಖಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ವಿಚಾರವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 
ಈ ಜೋಡಿ ಬೆತ್ತಲೆ ಮದುವೆಯಾಗುತ್ತಿರುವುದಕ್ಕೆ ಕಾರಣ ಇದೆ. ಅದು ಮದುವೆಯ ಬಟ್ಟೆಗೆ ವ್ಯಯ ಮಾಡುವ ಹಣವನ್ನು ಸೋಮಾಲಿಯ ಹಾಗೂ ಕಾಂಬೋಡಿಯಾದಲ್ಲಿರುವ ಬಡ ಕುಟುಂಬಗಳಿಗೆ ದಾನ ಮಾಡಲಿದ್ದಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.