ಬಾಲಿವುಡ್ ಡ್ಯಾನ್ಸರ್ ಅಭಿಜೀತ್ ಶಿಂಧೆ ಆತ್ಮಹತ್ಯೆಗೆ ಶರಣು
ಬಾಲಿವುಡ್ ನ ಜನಪ್ರಿಯ ನೃತ್ಯಗಾರ (ಡ್ಯಾನ್ಸರ್) ಅಭಿಜೀತ್ ಶಿಒಂಧೆ ಗುರುವಾರ ಬೆಳಗ್ಗೆ ಮುಂಬೈಯ ಬಂಧೂಪ್ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ

Published On :
ಮುಂಬೈ: ಬಾಲಿವುಡ್ ನ ಜನಪ್ರಿಯ ನೃತ್ಯಗಾರ (ಡ್ಯಾನ್ಸರ್) ಅಭಿಜೀತ್ ಶಿಒಂಧೆ ಗುರುವಾರ ಬೆಳಗ್ಗೆ ಮುಂಬೈಯ ಬಂಧೂಪ್ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ
ರಣಬೀರ್ ಕಪೂರ್ ಮತ್ತು ಅಜಯ್ ದೇವಗನ್ ಅವರುಗಳಂತಹಾ ಮೇರು ನಟರೊಡನೆ ಕೆಲಸ ಮಾಡಿದ್ದ ಈತ ಬಹು ದೀರ್ಘ ಕಾಲದಿಂಡ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
32 ವರ್ಷದ ನೃತ್ಯಪಟು ಖಿನ್ನತೆಯಿಂದ ಸಾವಿಗೆ ಶರಣಾಗಿದ್ದಾರೆಂದು ಹೇಳಲಾಗಿದೆ.
ಮೂರು ತಿಂಗಳ ಹಿಂದೆ ಅಭಿಜೀತ್ ಅವರ ಪತ್ನಿ ಅವರನ್ನು ಬಿತ್ಟು ಹೊರಟು ಹೋಗಿದ್ದರು.ಪತಿ-ಪತ್ನಿಯರಲ್ಲಿ ಮನಸ್ತಾಪವಿತ್ತು. ಅಭಿಜೀತ್ ತಾನು ಮಗಳನ್ನು ಭೇಟಿಯಾಗುವುದಕ್ಕೆ ಸಹ ಪತ್ನಿ ಅವಕಾಶ ನೀಡಿರಲಿಲ್ಲ ಎನ್ನ;ಲಾಗಿದೆ.
ಈ ಎಲ್ಲಾ ಕಾರಣದಿಂದ ಮನಸ್ಸು ವ್ಯಾಕುಲಗೊಂಡಿತ್ತು, ಅಭಿಜೀತ್ ಗುರುವಾರ (ಆಗಸ್ಟ್ 23) ಬೆಳಗ್ಗೆ 6.30 ಕ್ಕೆ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೋಲೀಸರು ಆತ್ಮಹತ್ಯೆ ಪ್ರಕರಣ ದಾಕಲಿಸಿಕೊಂಡಿದ್ದಾರೆ. ಮೃತರು ತಮ್ಮ ಬ್ಯಾಂಕ್ ಖಾತೆ ಹಣವನ್ನು ತನ್ನ ಮಗಳ ಹೆಸರಿಗೆ ವರ್ಗಾಯಿಸಲು ಬಯಸಿದ್ದಾರೆ ಎಂದು ಪೋಲೀಸರು ಮಾಹಿತಿ ನೀಡಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


