ಅಪರೂಪಕ್ಕೆ ಸಿಕ್ಕ ಚಿತ್ರದಿಂದ ಬಂದ ಪೂರ್ತಿ ಸಂಭಾವನೆಯನ್ನು ಕೇರಳಕ್ಕೆ ನೀಡಿದ ಬಾಲಿವುಡ್ ಹಾಟ್ ಬೆಡಗಿ!
ಮಹಾಮಳೆ, ಪ್ರವಾಹ ಮತ್ತು ಭೂಕುಸಿತದಿಂದ ನಲುಗಿರುವ ಕೇರಳಕ್ಕೆ ದೇಶ-ವಿದೇಶಗಳಿಂದ ಪರಿಹಾರದ ಮಹಾಪೂರವೇ ಹರಿದು ಬರುತ್ತಿದೆ...

Published On :
ಮಹಾಮಳೆ, ಪ್ರವಾಹ ಮತ್ತು ಭೂಕುಸಿತದಿಂದ ನಲುಗಿರುವ ಕೇರಳಕ್ಕೆ ದೇಶ-ವಿದೇಶಗಳಿಂದ ಪರಿಹಾರದ ಮಹಾಪೂರವೇ ಹರಿದು ಬರುತ್ತಿದೆ.
ಟಾಲಿವುಡ್, ಕಾಲಿವುಡ್ ಮತ್ತು ಸ್ಯಾಂಡಲ್ವುಡ್ ಸೇರಿದಂತೆ ಚಿತ್ರರಂಗದ ಪ್ರಮುಖರು ಕೇರಳಕ್ಕೆ ಸಹಾಯ ಹಸ್ತ ಚಾಚಿದ್ದರು. ಇದೀಗ ಬಾಲಿವುಡ್ ಮಾಡೆಲ್, ಹಾಟ್ ಬೆಡಗಿ ಪೂನಂ ಪಾಂಡೆ ತಮಗೆ ಅಪರೂಪಕ್ಕೆ ಸಿಕ್ಕ ಚಿತ್ರದಿಂದ ಬಂದ ಸಂಪೂರ್ಣ ಸಂಭಾವನೆಯನ್ನು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.
ಟಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿರುವ ಲೇಡಿ ಗಬ್ಬರ್ ಸಿಂಗ್ ಚಿತ್ರದಲ್ಲಿ ಪೂನಂ ಪಾಂಡೆ ಅಭಿನಯಿಸುತ್ತಿದ್ದಾರೆ. ಪೂನಂಗೆ ಅವಕಾಶಗಳು ತುಂಬ ಕಡಿಮೆಯಿದೆ. ಬಹಳ ದಿನಗಳ ಮೇಲೆ ಅವರು ಚಿತ್ರವೊಂದರಲ್ಲಿ ನಟಿಸುತ್ತಿದ್ದು ಇದರಿಂದ ಬಂದ ಸಂಪೂರ್ಣ ಸಂಭಾವನೆಯನ್ನು ಕೇರಳ ಸಂತ್ರಸ್ತರಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇನ್ನು ಪೂನಂ ಪಾಂಡೆ ಅವರು ಲೇಡಿ ಗಬ್ಬರ್ ಸಿಂಗ್ ಚಿತ್ರಕ್ಕೆ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಎನ್ನುವುದು ಬಹಿರಂಗವಾಗಿಲ್ಲ.
ಕೇರಳದಲ್ಲಿ ಸಂಭವಿಸಿದ ಶತಮಾನದ ಭೀಕರ ಮಳೆಗೆ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Poonam Pandeyಪೂನಂ ಪಾಂಡೆRelief Fundಪರಿಹಾರ ನಿಧಿಕೇರಳ ಪ್ರವಾಹKerala floodLady Gabbar Singhಲೇಡಿ ಗಬ್ಬರ್ ಸಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


