ಬಾಲಿವುಡ್

ಪಾಲಿ ಹಿಲ್ ಬಂಗಲೆ ಖರೀದಿ ವಿವಾದ: ಬ್ರೋಕರ್ ನಿಂದ ಕಿರುಕುಳ; ಕಂಗನಾ ರಣಾವತ್ ಆರೋಪ

ರಿಯಲ್ ಎಸ್ಟೇಟ್ ಬ್ರೋಕರ್ ಹಣ ನೀಡುವಂತೆ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ....

ಪಾಲಿ ಹಿಲ್ ಬಂಗಲೆ ಖರೀದಿ ವಿವಾದ: ಬ್ರೋಕರ್ ನಿಂದ ಕಿರುಕುಳ; ಕಂಗನಾ ರಣಾವತ್ ಆರೋಪ
ಕಂಗನಾ ರಣಾವತ್
Published On :
ಮುಂಬಯಿ: ರಿಯಲ್ ಎಸ್ಟೇಟ್ ಬ್ರೋಕರ್ ಹಣ ನೀಡುವಂತೆ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ.
ಕಳೆದ ವರ್ಷ ಕಂಗನಾ ಪಾಲಿ ಹಿಲ್ ನಲ್ಲಿ ಬಂಗಲೆಯೊಂದನ್ನು ಖರೀದಿಸಿದ್ದರು. ಬಂಗಲೆ ಖರೀದಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಿಯಲ್ ಎಸ್ಟೇಟ್ ಬ್ರೋಕರ್ ಮುಂಬಯಿಯ ಖಾರ್ ಪೊಲೀಸ್ ಠಾಣೆಗೆ ಕಂಗನಾ ಮತ್ತು ಆಕೆಯ ಸಹೋದರಿ ರಂಗೋಲಿ ಚಾಂದೆಲ್ ವಿರುದ್ಧ ದೂರು ನೀಡಿದ್ದಾರೆ.
ನನಗೆ ಡೀಲ್ ಮಾಡಿಕೊಟ್ಟ ಏಜೆನ್ಸಿಗೆ ಈಗಾಗಗಲೇ ನಾನು ಹಣ ನೀಡಿದ್ದೇನೆ. ಶೇ. 1ರಷ್ಟು ಬ್ರೋಕರ್ ಕಮಿಷನ್ ನಂತೆ 22 ಲಕ್ಷ ಹಣ ನೀಡಿದ್ದೇನೆ, ಕೆಲವು ತಿಂಗಳ ಹಿಂದೆಯೇ ಅವರಿಗೆ ಹಣ ನೀಡಲಾಗಿದೆ, ದಲ್ಲಾಳಿಗಳಲ್ಲಿ ಒಬ್ಬರು ನನಗೆ ಈ ಡೀಲ್ ಮಾಡಿಸಿಕೊಟ್ಟಿದ್ದರು ಎಂದು ಕಂಗನಾ ಹೇಳಿದ್ದಾರೆ.
ಮತ್ತೆ ಹಣ ನೀಡುವಂತೆ ನನಗೆ ಕಿರುಕುಳ ನೀಡಲಾಗುತ್ತಿದೆ, ನನ್ನ ಹಣಕಾಸಿನ ತಂಡ ಯಾವುದೇ ಬಾಕಿ ಉಳಿಸಿಕೊಳ್ಳುವುದಿಲ್ಲ, ರಿಯಲ್ ಎಸ್ಟೇಟ್ ಬ್ರೋಕರ್ ಗಳು ಮತ್ತೆ 22 ಲಕ್ಷ ಹಣ ನೀಡುವಂತೆ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ, ಶೇ. ರಷ್ಟು ಕಮಿಷನ್ ನೀಡಬೇಕೆಂದು ಅವರು ಹೇಳುತ್ತಿದ್ದಾರೆ,  ಶೇ. ರಷ್ಟು ಕಮಿಷನ್ ನೀಡುವ ಬಗ್ಗೆ ಯಾವಾಗಲೂ ಮಾತನಾಡಿಯೇ ಇರಲಿಲ್ಲ, ನಾವು ಪೊಲೀಸರಿಗೆ ಎಲ್ಲಾ ವಿಷಯ ತಿಳಿಸಿದ್ದೇವೆ, ಈ ಸಂಬಂಧ ನಮ್ಮ ಬಳಿ ಅಗತ್ಯ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ. 
ಪಲಿ ಹಿಲ್ ನಲ್ಲಿರುವ ಬಂಗಲೆಗಾಗಿ ಕಂಗನಾ 1.3ಕೋಟಿ ರು ಹಣ ನೀಡಿದ್ದರು. 3,075 ಚದರ ಅಡಿ ಬಂಗಲೆ ಇದಾಗಿದೆ. ಜೊತೆಗೆ ಕಾರ್ ಪಾರ್ಕಿಂಗ್ ಗಾಗಿ 565 ತದರ ಅಡಿ ಜಾಗವೂ ಇದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.