ಪ್ರಿಯಾಂಕಾ-ನಿಕ್ ಜೋನಾಸ್ ನಿಶ್ಚಿತಾರ್ಥ ಔತಣಕೂಟದ ಸಿದ್ಧತೆಯಲ್ಲಿ ಚೋಪ್ರಾ ಕುಟುಂಬ
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಗಾಯಕ ನಿಖ್ ಜೊನಸ್ ಜೊತೆ ನಿಶ್ಚಿತಾರ್ಥ...

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಗಾಯಕ ನಿಖ್ ಜೊನಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದೆಯೇ ಬಂದಿತ್ತು. ಇದೀಗ ಭಾರತದಲ್ಲಿ ತಮ್ಮ ಕುಟುಂಬದವರು, ಬಂಧುಗಳು ಮತ್ತು ಸ್ನೇಹಿತರಿಗೆ ಎಂಗೇಜ್ ಮೆಂಟ್ ಔತಣಕೂಟ ನೀಡಲು ಭಾರತಕ್ಕೆ ನಿಖ್ ಜೊನಸ್ ಜೊತೆ ಬರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇ ಆನ್ ಲೈನ್ ವರದಿ ಪ್ರಕಾರ, ನಿಖ್ ಜೊನಸ್ ಮತ್ತು ಆತನ ಸಮೀಪ ಬಂಧುಗಳು ಈ ವಾರಾಂತ್ಯ ಭಾರತಕ್ಕೆ ಆಗಮಿಸಲಿದ್ದು ಎಂಗೇಜ್ ಮೆಂಟ್ ಪಾರ್ಟಿಯಲ್ಲಿ ಭಾಗವಹಿಸಲಿದ್ದಾರೆ. ಮದುವೆಗೆ ಮೊದಲು ಎರಡೂ ಕುಟುಂಬಗಳು ಒಟ್ಟು ಸೇರಬೇಕೆಂದು ಚೋಪ್ರಾ ಕುಟುಂಬ ಈ ಪಾರ್ಟಿಯನ್ನು ಆಯೋಜಿಸಿದೆ. ಪ್ರಿಯಾಂಕಾ ಚೋಪ್ರಾ ತಮ್ಮ ಮದುವೆಯ ಕಾರ್ಯಕ್ರಮಗಳು ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ನಡೆಯಬೇಕೆಂದು ಬಯಸುತ್ತಿದ್ದು ಭಾರತೀಯ ಶೈಲಿಯಲ್ಲಿಯೇ ವಿವಾಹವಾಗಲಿದ್ದಾರೆ ಎಂದು ತಿಳಿದುಬಂದಿದೆ.
ನಿಶ್ಚಿತಾರ್ಥ ಪಾರ್ಟಿಯ ಕಾರ್ಯಕ್ರಮವನ್ನು ಗೌಪ್ಯವಾಗಿಟ್ಟಿದ್ದು ನಾಳೆಯಿಂದ ಅತಿಥಿಗಳು ಆಗಮಿಸಲಿದ್ದಾರೆ. ನಿಶ್ಚಿತಾರ್ಥಕ್ಕೆ ಸಂಬಂಧಪಟ್ಟ ಕಾರ್ಯಕ್ರಮವನ್ನು ಚಿಕ್ಕದಾಗಿ ಮತ್ತು ಚೊಕ್ಕವಾಗಿ ಮುಗಿಸಲು ಈ ಜೋಡಿ ಬಯಸುತ್ತಿದೆ ಎಂದು ವೆಬ್ ಸೈಟ್ ವರದಿ ಮಾಡಿದೆ.
ಬಾಲಿವುಡ್ ನಿರ್ದೇಶಕ ಅಲಿ ಅಬ್ಬಸ್ ಝಫರ್ ಅವರು ಪ್ರಿಯಾಂಕಾ ತಮ್ಮ ಚಿತ್ರ ಭಾರತ್ ನಿಂದ ಹೊರಹೋಗಿದ್ದು ಅವರಿಗೆ ಇದು ವಿಶೇಷವಾದ ಸಮಯ, ನಿಖ್ ಸಮಯ ಎಂದು ಟ್ವೀಟ್ ಮಾಡುವ ಮೂಲಕ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡರು ಎಂಬುದು ಸುದ್ದಿಯಾಯಿತು.
ಇದಕ್ಕೂ ಮುನ್ನ ಪ್ರಿಯಾಂಕಾ ಎರಡು ಸಮಾರಂಭಗಳಲ್ಲಿ ತಮ್ಮ ಎಂಗೇಜ್ ಮೆಂಟ್ ಉಂಗುರವನ್ನು ಕ್ಯಾಮರಾ ಕಣ್ಣುಗಳಿಂದ ಮುಚ್ಚಿಡಲು ಬಯಸಿದ್ದರು. ಎರಡು ತಿಂಗಳ ಕಾಲ ಡೇಟಿಂಗ್ ಮಾಡಿ ಮದುವೆ ಮಾಡಿಕೊಳ್ಳಲು ನಿಶ್ಚಯಿಸಿರುವ ಪ್ರಿಯಾಂಕಾ ಮತ್ತು ನಿಖ್ ಮೊದಲ ಬಾರಿಗೆ ಭೇಟಿಯಾದದ್ದು 2017ರ ಮೆಟ್ ಗಾಲಾ ಕಾರ್ಯಕ್ರಮದಲ್ಲಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


